ಪ್ರೊ ಕಬಡ್ಡಿ: ಫಾರ್ಚೂನ್ ಜೈಂಟ್ಸ್‌ ಗೆಲುವು

7

ಪ್ರೊ ಕಬಡ್ಡಿ: ಫಾರ್ಚೂನ್ ಜೈಂಟ್ಸ್‌ ಗೆಲುವು

Published:
Updated:

ವಿಶಾಖಪಟ್ಟಣ: ಕೆ. ಪ್ರಪಂಚನ್ ಮತ್ತು ಸಚಿನ್ ಅವರ ಅಮೋಘ ಅಟದ ಫಲವಾಗಿ  ಗುಜರಾತ್ ಫಾರ್ಚೂನ್‌ ಜೈಂಟ್ಸ್‌ ತಂಡವು ಇಲ್ಲಿ ನಡೆಯುತ್ತಿರುವ ಪ್ರೊಕಬಡ್ಡಿ ಟೂರ್ನಿಯ ಪಂದ್ಯದಲ್ಲಿ ಜಯಿಸಿತು.

ರಾಜೀವಗಾಂಧಿ ಒಳಾಂಗಣ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಟೂರ್ನಿಯಲ್ಲಿ ಬುಧವಾರ ಫಾರ್ಚೂನ್‌ ಜೈಂಟ್ಸ್‌ ತಂಡವು 47–37 ರಿಂದ ಹರಿಯಾಣ ಸ್ಟೀಲರ್ಸ್‌ ವಿರುದ್ಧ ಗೆದ್ದಿತು. ಪ್ರಂಪಚನ್ 12 ಮತ್ತು ಸಚಿನ್ 10 ಪಾಯಿಂಟ್ಸ್‌ ಗಳಿಸಿದರು. ಪ್ರವೇಶ ಭನ್ಸವಾಲ್ ಮತ್ತು ಸುನಿಲ್‌ ಕುಮಾರ ಅವರು ಟ್ಯಾಕಲ್‌ನಲ್ಲಿ ತಲಾ ನಾಲ್ಕು ಅಂಕ ಗಳಿಸಿದರು.

ಲೀ ಡಾಂಗ್ ಜಿಯಾನ್ ಆಲ್‌ ರೌಂಡ್ ಆಟವಾಡಿದರು ರೇಡಿಂಗ್ ಮತ್ತು ಟ್ಯಾಕಲ್‌ನಲ್ಲಿ ಒಟ್ಟು ನಾಲ್ಕು ಪಾಯಿಂಟ್ಸ್‌ ಪಡೆದರು.

ಹರಿಯಾಣ ತಂಡದ ಮೋನು ಗೊಯತ್ ರೇಡಿಂಗ್‌ನಲ್ಲಿ ಎಂಟು ಮತ್ತು ಮೂರು ಬೋನಸ್ ಪಾಯಿಂಟ್ಸ್‌ ಪಡೆದರು. ನವೀನ್ ರೇಡಿಂಗ್‌ನಲ್ಲಿ ಏಳು, ವಿಕಾಸ್ ಖಂಡೋಲಾ ಅವರು ಕ್ರಮವಾಗಿ ಏಳು ಮತ್ತು ಆರು ಅಂಕಗಳನ್ನು ಗಳಿಸಿದರು.

Tags: 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !