ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೇರಳ ಮೌಂಟೇನ್ ಬೈಕ್ ಸೈಕ್ಲಿಂಗ್‌ನಲ್ಲಿ ಕರ್ನಾಟಕದ ಅನನ್ಯಾ ಕಡಿದಾಳ್‌ಗೆ ಜಯ

Last Updated 22 ಡಿಸೆಂಬರ್ 2019, 4:44 IST
ಅಕ್ಷರ ಗಾತ್ರ

ಮಾನಂತವಾಡಿ (ವಯನಾಡ್):ಕೇರಳದ ವಯನಾಡ್ ಬಳಿ ಶನಿವಾರ ನಡೆದಅಮೆಚೂರ್‌ ಮೌಂಟೇನ್ ಬೈಕ್ ಸೈಕ್ಲಿಂಗ್‌ನಲ್ಲಿ ಶಿವಮೊಗ್ಗ ಜಿಲ್ಲೆಯ ರೈತ ಅನನ್ಯಾಕಡಿದಾಳ್ ಅವರು ಪುರುಷರ ವಿಭಾಗದಲ್ಲಿ ಜಯಗಳಿಸಿದ್ದಾರೆ. ಮಹಿಳೆಯರ ವಿಭಾಗದಲ್ಲಿ ಕೇರಳದ ಇಡುಕ್ಕಿ ಜಿಲ್ಲೆಯ ವೆನ್‌ಮನಿಯ ಗಿನಿಮೋಳ್ ಜೋಸೆಫ್ ಅವರು ವಿಜಯ ಸಾಧಿಸಿದ್ದಾರೆ.

ಪುರುಷರ ವಿಭಾಗದಲ್ಲಿ ಎರ್ನಾಕುಳಂ ಜಿಲ್ಲೆಯ ಯಧುನ್ ಮದನನ್ ರನ್ನರ್ ಅಪ್ ಮತ್ತು ಮಜೂದ್ ಎಂ ಸೆಕೆಂಡ್ ರನ್ನರ್ ಅಪ್ ಆಗಿದ್ದರೆ, ಮಹಿಳೆಯರ ವಿಭಾಗದಲ್ಲಿ ಮಹಾರಾಷ್ಟ್ರದ ಶುಭಾಂಗಿ ಸರ್ವದೆ (ಪುಣೆ) ರನ್ನರ್ ಅಪ್ ಆಗಿದ್ದಾರೆ.

ಕೇರಳ ಅಡ್ವೆಂಚರ್ ಟೂರಿಸಂ ಪ್ರೊಮೊಷನ್ ಸೊಟೈಟಿ, ವಯನಾಡ್ ಜಿಲ್ಲಾ ಪ್ರವಾಸೋದ್ಯಮ ಉತ್ತೇಜನ ಮಂಡಳಿ ಮತ್ತು ಸೈಕ್ಲಿಂಗ್ ಫೆಡರೇಷನ್ ಆಫ್ ಇಂಡಿಯಾ ಸಹಭಾಗಿತ್ವದಲ್ಲಿಮೌಂಟೇನ್ ಬೈಕ್ ಸೈಕ್ಲಿಂಗ್‌ ಆಯೋಜಿಸಲಾಗಿತ್ತು.

ಕಡಿದಾಳ್ ಅವರು 4.8 ಕಿ.ಮೀ ಟ್ರ್ಯಾಕ್‌ನ 2 ಸುತ್ತುಗಳನ್ನು 35:21:611 ನಿಮಿಷಗಳಲ್ಲಿ ಕ್ರಮಿಸಿದ್ದಾರೆ. ಇವರು 23:08:469 ನಿಮಿಷಗಳಲ್ಲಿ 1 ಸುತ್ತು ಕ್ರಮಿಸಿದ್ದಾರೆ.

ಅನನ್ಯಾಅವರು ಕಳೆದ 9 ವರ್ಷಗಳಿಂದ ವೃತ್ತಿಪರ ಸೈಕ್ಲಿಂಗ್‌ನಲ್ಲಿ ಭಾಗವಹಿಸುತ್ತಿದ್ದಾರೆ.ಗಿನಿಮೋಳ್ ಅವರು 2018ರಿಂದ ಈಚೆಗೆಸೈಕ್ಲಿಂಗ್‌ನಲ್ಲಿ ತೊಡಗಿಸಿಕೊಂಡಿದ್ದಾರೆ. ಪದವಿ ಅಧ್ಯಯನದ ಜತೆಗೇ ಅವರುಸೈಕ್ಲಿಂಗ್‌ ಚಟುವಟಿಕೆಗಳಲ್ಲಿ ಭಾಗವಹಿಸುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT