ಮಂಗಳವಾರ, ಜೂನ್ 22, 2021
28 °C

ಟೇಬಲ್‌ ಟೆನಿಸ್‌ ಕಾವ್ಯಶ್ರೀಗೆ ಕಂಚು

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ : ಮಸ್ಕತ್‌ನಲ್ಲಿ ನಡೆದ ಒಮನ್‌ ಜೂನಿಯರ್‌ ಮತ್ತು ಕೆಡೆಟ್‌ ಟೇಬಲ್‌ ಟೆನಿಸ್‌ ಟೂರ್ನಿಯಲ್ಲಿ  ಭಾರತದ ಯುವ ಆಟಗಾರ್ತಿಯರಾದ ಸ್ವಸ್ತಿಕಾ ಘೋಷ್‌ ಮತ್ತು ಕಾವ್ಯಶ್ರೀ ಭಾಸ್ಕರ್‌ ಸ್ಫೂರ್ತಿಯುತ ಪ್ರದರ್ಶನ ನೀಡಿ ಕಂಚಿನ ಪದಕಗಳನ್ನು ಗೆದ್ದುಕೊಂಡಿದ್ದಾರೆ.

ಈ ಟೂರ್ನಿಯ ಟೀಮ್‌ ವಿಭಾಗದಲ್ಲಿ ಬೆಳ್ಳಿ ಪದಕ ಗೆದ್ದುಕೊಂಡಿದ್ದ ಸ್ವಸ್ತಿಕಾ ಜೂನಿಯರ್‌ ಬಾಲಕಿಯರ ಸಿಂಗಲ್ಸ್‌ನಲ್ಲೂ ಗಮನಾರ್ಹ ಪ್ರದರ್ಶನ ನೀಡಿದರು. ಗುಂಪು ಹಂತದ ಪಂದ್ಯಗಳಲ್ಲಿ ಅಜೇಯರಾಗಿದ್ದ ಅವರು 16ರ ಸುತ್ತಿನಲ್ಲಿ ಬೈ ಪಡೆದಿದ್ದರು.

ಎಂಟರ ಘಟ್ಟದಲ್ಲಿ ವಾನ್‌ ಸುವಾನ್‌ ಲೀ ವಿರುದ್ಧ 4–3ರಲ್ಲಿ ಜಯಗಳಿಸಿದ ಅವರು ಸೆಮಿಫೈನಲ್‌ನಲ್ಲಿ ಚೀನಾ ತೈಪಿಯ ಯಿ ಚೆನ್‌ ಹ್ಸು ಅವರಿಗೆ ಹೋರಾಟ ನೀಡಿ 3–4 ರಲ್ಲಿ ಮಣಿದು ಕಂಚಿನ ಪದಕ ಪಡೆಯಬೇಕಾಯಿತು.

ಕೆಡೆಟ್‌ ಸಿಂಗಲ್ಸ್‌ನಲ್ಲಿ ಕಾವ್ಯಶ್ರೀ ಕೂಡ ಗುಂಪು ಹಂತದಲ್ಲಿ ಅಜೇಯರಾಗುಳಿದಿದ್ದರು.

ಅವರು ಸೆಮಿಫೈನಲ್‌ನಲ್ಲಿ ತೈಪಿಯ ಪು ಸುವಾನ್‌ಗೆ 1–3ರಲ್ಲಿ ಮಣಿದರು.
ಪು ಸುವಾನ್‌ ಅಂತಿಮವಾಗಿ ಟೂರ್ನಿಯಲ್ಲಿ ಚಾಂಪಿಯನ್‌ ಆದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು