ಖೇಲೊ ಇಂಡಿಯಾ: ಐದು ‍ಪದಕ ಗೆದ್ದ ಬವಲೀನ್‌

7

ಖೇಲೊ ಇಂಡಿಯಾ: ಐದು ‍ಪದಕ ಗೆದ್ದ ಬವಲೀನ್‌

Published:
Updated:

ಪುಣೆ: ಅಮೋಘ ಕೌಶಲಗಳನ್ನು ತೋರಿದ ಜಮ್ಮು ಮತ್ತು ಕಾಶ್ಮೀರದ ಬವಲೀನ್‌ ಕೌರ್‌ ಅವರು ಶುಕ್ರವಾರ ಖೇಲೊ ಇಂಡಿಯಾ ಯೂತ್‌ ಕ್ರೀಡಾಕೂಟದ ಜಿಮ್ನಾಸ್ಟಿಕ್ಸ್‌ ಸ್ಪರ್ಧೆಯಲ್ಲಿ ಒಟ್ಟು ಐದು ಪದಕಗಳನ್ನು ಗೆದ್ದು ದಾಖಲೆ ನಿರ್ಮಿಸಿದರು.

15ರ ಹರೆಯದ ಬವಲೀನ್‌, ಮೂರು ಚಿನ್ನ ಮತ್ತು ಎರಡು ಬೆಳ್ಳಿಯ ಪದಕಗಳಿಗೆ ಕೊರಳೊಡ್ಡಿದರು.

ಬಾಲ್‌ (12.35 ಪಾಯಿಂಟ್ಸ್‌), ರಿಬ್ಬನ್‌ (11.25 ಪಾ.), ಕ್ಲಬ್ಸ್‌ (13.30 ಪಾ.) ಮತ್ತು ಹೂಪ್‌ (11.40 ಪಾ.) ವಿಭಾಗಗಳಲ್ಲಿ ಬವಲೀನ್‌ ಪದಕಗಳನ್ನು ಗೆದ್ದರು. ಒಟ್ಟಾರೆ 43.40 ಪಾಯಿಂಟ್ಸ್‌ ಕಲೆಹಾಕಿದ ಅವರು ಆಲ್‌ ರೌಂಡ್‌ ವಿಭಾಗದ ಚಿನ್ನದ ಪದಕ ತಮ್ಮದಾಗಿಸಿಕೊಂಡರು.

‘ನಮ್ಮ ರಾಜ್ಯದಲ್ಲಿ ಜಿಮ್ನಾಸ್ಟಿಕ್ಸ್‌ಗೆ ಅಗತ್ಯವಿರುವ ಮೂಲ ಸೌಕರ್ಯಗಳಿಲ್ಲ. ಕೋಚ್‌ಗಳಾದ ಕೃಪಾಲಿ ಪಟೇಲ್ ಸಿಂಗ್‌ ಮತ್ತು ಎಸ್‌.ಪಿ.ಸಿಂಗ್‌ ಅವರು ಹೇಳಿಕೊಟ್ಟ ಕೌಶಲಗಳನ್ನು ಮೈಗೂಡಿಸಿಕೊಂಡಿದ್ದರಿಂದ ಪದಕದ ಸಾಧನೆ ಮಾಡಲು ಸಾಧ್ಯವಾಯಿತು’ ಎಂದು ಬವಲೀನ್‌ ಹೇಳಿದ್ದಾರೆ.

ಬರಹ ಇಷ್ಟವಾಯಿತೆ?

 • 7

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !