ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲೀಗೆ ’ಚೊಚ್ಚಲ’ ಪ್ರಶಸ್ತಿ ಸಂಭ್ರಮ

ಹಾಂಗ್‌ ಕಾಂಗ್ ಓಪನ್ ಬ್ಯಾಡ್ಮಿಂಟನ್: ಹೊರಗೆ ಪ್ರತಿಭಟನೆ; ಒಳಗೆ ಪ್ರಬಲ ಪೈಪೋಟಿ
Last Updated 17 ನವೆಂಬರ್ 2019, 20:03 IST
ಅಕ್ಷರ ಗಾತ್ರ

ಹಾಂಗ್‌ಕಾಂಗ್: ಸೋಲಿನ ಸುಳಿಯಿಂದ ಮೇಲೆದ್ದು ಗೆಲುವಿನ ಸೌಧ ಕಟ್ಟಿದ ಸ್ಥಳೀಯ ಆಟಗಾರ ಲೀ ಚ್ಯೂಕ್ ಯೂ ಅವರು ಹಾಂಗ್‌ಕಾಂಗ್ ಓಪನ್ ಬ್ಯಾಡ್ಮಿಂಟನ್‌ ಟೂರ್ನಿಯ ಪ್ರಶಸ್ತಿ ಗೆದ್ದು ಸಂಭ್ರಮಿಸಿದರು. ಇದು ಲೀ ಅವರಿಗೆ ಪ್ರಮುಖ ಟೂರ್ನಿಯ ಚೊಚ್ಚಲ ಪ್ರಶಸ್ತಿಯಾಗಿದೆ.

ಭಾನುವಾರ, ಹೊರಗೆ ಬೀದಿ ಬೀದಿಯಲ್ಲಿ ಪ್ರಜಾಪ್ರಭುತ್ವದ ಪರ ಭಾರಿ ಪ್ರತಿಭಟನೆ ನಡೆಯುತ್ತಿರುವಾಗಲೇ ಒಳಗೆ ಪ್ರಬಲ ಪೈಪೋಟಿ ನಡೆದಿತ್ತು. ಇಂಡೊನೇಷ್ಯಾದ ಆ್ಯಂಟನಿ ಜಿಂಟಿಂಗ್ ಎದುರಿನ ಫೈನಲ್ ಪಂದ್ಯದಲ್ಲಿ 23 ವರ್ಷದ ಲೀ 16–21, 21–10, 22–20ರಲ್ಲಿ ಗೆದ್ದರು. ‌

ಕ್ವಾರ್ಟರ್ ಫೈನಲ್‌ನಲ್ಲಿ ಡೆನ್ಮಾರ್ಕ್‌ನ ವಿಕ್ಟರ್ ಅಕ್ಸೆಲ್ಸನ್ ಮತ್ತು ಸೆಮಿಫೈನಲ್‌ನಲ್ಲಿ ಭಾರತದ ಕಿದಂಬಿ ಶ್ರೀಕಾಂತ್ ಅವರನ್ನು ಮಣಿಸಿ ಲೀ ಗಮನ ಸೆಳೆದಿದ್ದರು.

ಮಹಿಳೆಯರ ಸಿಂಗಲ್ಸ್ ವಿಭಾಗದಲ್ಲಿ ಚೀನಾದ ಚೆನ್‌ ಯೂಫಿ 21–18, 13–21, 21–13ರಲ್ಲಿ ಥಾಯ್ಲೆಂಡ್‌ನ ರಚನೊಕ್ ಇಂಟನನ್ ವಿರುದ್ಧ ಗೆದ್ದು ಪ್ರಶಸ್ತಿ ಗೆದ್ದುಕೊಂಡರು. ಪುರುಷರ ಡಬಲ್ಸ್‌ ಫೈನಲ್‌ನಲ್ಲಿ ದಕ್ಷಿಣ ಕೊರಿಯಾದ ಚೊಯ್ ಸೊಲ್ ಗ್ಯೂ ಮತ್ತು ಸಿಯೊ ಸೆಂಗ್ ಜೇ ಜೋಡಿ ಇಂಡೊನೇಷ್ಯಾದ ಮೊಹಮ್ಮದ್ ಅಹ್ಸಾನ್ ಮತ್ತು ಹೇಂದ್ರ ಸತ್ಯವಾನ್ ಎದುರು ಗೆದ್ದರು. ಮಹಿಳೆಯರ ಡಬಲ್ಸ್‌ನಲ್ಲಿ ಚೀನಾದ ಚೆನ್‌ ಕ್ವಿಂಗ್‌ಚೆನ್ ಮತ್ತು ಜಿಯಾ ಯಿಫಾನ್ ಜೋಡಿ ಚಾಂಗ್‌ ಏ ನಾ ಮತ್ತು ಕಿಮ್‌ ಹೇ ರಿನ್ ಅವರನ್ನು ಸೋಲಿಸಿ ಪ್ರಶಸ್ತಿ ಗಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT