ಹಾಕಿ: ಪೂವಣ್ಣ, ಚಿರಾಮ್‌ ಕೈಚಳಕ

7

ಹಾಕಿ: ಪೂವಣ್ಣ, ಚಿರಾಮ್‌ ಕೈಚಳಕ

Published:
Updated:
Deccan Herald

ಬೆಂಗಳೂರು: ಸಿ.ಬಿ.ಪೂವಣ್ಣ ಮತ್ತು ಚಿರಾಮ್‌ ಮೇದಪ್ಪ ಕೈಚಳಕದಲ್ಲಿ ಅರಳಿದ ತಲಾ ನಾಲ್ಕು ಗೋಲುಗಳ ಬಲದಿಂದ ಸೇಂಟ್‌ ಜೋಸೆಫ್‌ ಇಂಡಿಯನ್‌ ಪ್ರೌಢಶಾಲೆ ತಂಡ ರೋಟರಿ ಕ್ಲಬ್‌ ಇಂದಿರಾನಗರ ಆಶ್ರಯದ ಜಿ.ಎಸ್‌.ರಾಂಧವಾ ಸ್ಮಾರಕ ಅಂತರ ಶಾಲಾ ಹಾಕಿ ಟೂರ್ನಿಯ ಪಂದ್ಯದಲ್ಲಿ ಜಯಭೇರಿ ಮೊಳಗಿಸಿದೆ.

ಕೆಎಸ್‌ಎಚ್‌ಎ ಅಂಗಳದಲ್ಲಿ ಬುಧವಾರ ನಡೆದ ಹಣಾಹಣಿಯಲ್ಲಿ ಸೇಂಟ್‌ ಜೋಸೆಫ್‌ ಬಾಲಕರ ತಂಡ 12–0 ಗೋಲುಗಳಿಂದ ಫ್ರಾಂಕ್‌ ಅಂಥೋಣಿ ಪಬ್ಲಿಕ್‌ ಶಾಲೆ ತಂಡವನ್ನು ಮಣಿಸಿತು.

ವಿಜಯಿ ತಂಡದ ಪೂವಣ್ಣ 4, 5, 9 ಮತ್ತು 22ನೇ ನಿಮಿಷಗಳಲ್ಲಿ ಚೆಂಡನ್ನು ಗುರಿ ಮುಟ್ಟಿಸಿದರು. ಚಿರಾಮ್‌ ಅವರು 13, 17, 30 ಮತ್ತು 36ನೇ ನಿಮಿಷಗಳಲ್ಲಿ ಗೋಲು ಬಾರಿಸಿದರು.

ಭವಿನ್‌ ಕುಶಾಲಪ್ಪ (24ನೇ ನಿಮಿಷ), ಗ್ಯಾನ್‌ ಗಣಪತಿ (25ನೇ ನಿ.), ನೇಥನ್‌ ಡಿಸೋಜ (31 ಮತ್ತು 39ನೇ ನಿ.) ಗೆಲುವಿನ ಅಂತರ ಹೆಚ್ಚಿಸಿದರು.

ಇನ್ನೊಂದು ಪಂದ್ಯದಲ್ಲಿ ಕೂಡಿಗೆಯ ಕ್ರೀಡಾ ಶಾಲೆ 3–2 ಗೋಲುಗಳಿಂದ ಪೊನ್ನಂಪೇಟೆಯ ಕ್ರೀಡಾ ಶಾಲೆ ಎದುರು ಗೆದ್ದಿತು.

ಕೂಡಿಗೆ ಶಾಲೆಯ ಪರ ಎಂ.ಗಣೇಶ್‌ (21 ಮತ್ತು 39ನೇ ನಿಮಿಷ), ಜಿ.ವಿಶ್ವಾಸ್‌ (14ನೇ ನಿ.) ಗೋಲು ದಾಖಲಿಸಿದರು.

ಬಳ್ಳಾರಿಯ ಕ್ರೀಡಾ ಶಾಲೆ ತಂಡ 6–3 ಗೋಲುಗಳಿಂದ ಪೊನ್ನಂಪೇಟೆಯ ಸೇಂಟ್‌ ಅಂಥೋಣಿ ಶಾಲೆ ಎದುರು ಗೆದ್ದಿತು.

ವಿಜಯಿ ತಂಡದ ದರ್ಶನ್‌ ನಾಯಕ್ 17, 19 ಮತ್ತು 39ನೇ ನಿಮಿಷಗಳಲ್ಲಿ ಚೆಂಡನ್ನು ಗುರಿ ಮುಟ್ಟಿಸಿದರು. ಸೇಂಟ್‌ ಅಂಥೋಣಿ ತಂಡದ ಬಿ.ಆರ್‌.ಬಿಪಿನ್‌ (18, 27 ಮತ್ತು 37ನೇ ನಿ.) ಮೂರು ಗೋಲು ದಾಖಲಿಸಿ ಸೋಲಿನ ನಡುವೆಯೂ ಗಮನ ಸೆಳೆದರು.

ದಿನದ ಮತ್ತೊಂದು ಹೋರಾಟದಲ್ಲಿ ಆರ್‌ಡಿಟಿ ಅನಂತಪುರ ತಂಡ 4–1 ಗೋಲುಗಳಿಂದ ಆರ್‌.ಎಂ.ಎಸ್‌. ಬೆಂಗಳೂರು ತಂಡವನ್ನು ಪರಾಭವಗೊಳಿಸಿತು.

ಆರ್‌ಡಿಟಿ ಪರ ಪಿ.ತರುಣ್‌ ಕುಮಾರ್‌ (13 ಮತ್ತು 39ನೇ ನಿಮಿಷ), ಸಿ.ಪ್ರಶಾಂತ್‌ (19ನೇ ನಿ.) ಮತ್ತು ಎಂ.ಚರಣ್‌ ಕುಮಾರ್‌ (34ನೇ ನಿ.) ಮಿಂಚಿದರು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !