ಭಾನುವಾರ, ಸೆಪ್ಟೆಂಬರ್ 26, 2021
28 °C

ಬಾಕ್ಸಿಂಗ್‌: ಮಂದೀಪ್‌ಗೆ ಗೆಲುವು

ಪಿಟಿಐ Updated:

ಅಕ್ಷರ ಗಾತ್ರ : | |

ಥಾಂಪಾ, ಫ್ಲೋರಿಡಾ: ಭಾರತದ ಮಂದೀಪ್‌ ಜಾಂಗ್ರಾ ವೃತ್ತಿಪರ ಬಾಕ್ಸಿಂಗ್‌ನಲ್ಲಿ ಎರಡನೇ ಗೆಲುವು ದಾಖಲಿಸಿದ್ದಾರೆ.

ಭಾನುವಾರ ನಡೆದ 61 ಕೆ.ಜಿ.ವಿಭಾಗದ ಲೈಟ್‌ವೇಟ್‌ ಹಣಾಹಣಿಯಲ್ಲಿ ಮಂದೀಪ್‌, ಸ್ಥಳೀಯ ಬಾಕ್ಸರ್‌ ಡೆವೊನ್‌ ಲಿರಾ ಅವರನ್ನು ಪರಾಭವಗೊಳಿಸಿದರು. 

2013ರ ಏಷ್ಯನ್‌ ಚಾಂಪಿಯನ್‌ಷಿಪ್‌ ಮತ್ತು 2014ರ ಕಾಮನ್‌ವೆಲ್ತ್‌ ಕ್ರೀಡಾಕೂಟದಲ್ಲಿ ಬೆಳ್ಳಿಯ ಪದಕ ಗೆದ್ದ ಸಾಧನೆ ಮಾಡಿರುವ 27 ವರ್ಷದ ಮಂದೀಪ್‌, ಈ ವರ್ಷದ ಮಾರ್ಚ್‌ನಲ್ಲಿ ವೃತ್ತಿಪರ ಬಾಕ್ಸಿಂಗ್‌ಗೆ ಅಡಿ ಇಟ್ಟಿದ್ದರು.

‘ಅಮೆಚೂರ್‌ ಬಾಕ್ಸಿಂಗ್‌ನಲ್ಲಿ 69 ಕೆ.ಜಿ.ವಿಭಾಗದಲ್ಲಿ ಪಾಲ್ಗೊಳ್ಳುತ್ತಿದ್ದೆ. ವೃತ್ತಿಪರ ಬಾಕ್ಸಿಂಗ್‌ಗಾಗಿ ತೂಕ ಇಳಿಸಿಕೊಳ್ಳಬೇಕಾಯಿತು. ಸತತ ಎರಡು ಪಂದ್ಯಗಳಲ್ಲೂ ಗೆದ್ದಿದ್ದು ಖುಷಿ ನೀಡಿದೆ. ನನ್ನನ್ನು ಹುರಿದುಂಬಿಸಿದ ಎಲ್ಲರಿಗೂ ಕೃತಜ್ಞನಾಗಿದ್ದೇನೆ’ ಎಂದು ಮಂದೀಪ್‌ ಹೇಳಿದ್ದಾರೆ.

ಮೊದಲ ಸುತ್ತಿನ ಹಣಾಹಣಿಯಲ್ಲಿ ಮಂದೀಪ್‌, ಅರ್ಜೆಂಟೀನಾದ ಲುಸಿಯಾನೊ ರಾಮೊಸ್‌ ಅವರನ್ನು ಸೋಲಿಸಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.