ಭಾನುವಾರ, 28 ಮೇ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶೂಟಿಂಗ್‌: ಕಂಚಿನ ಪದಕ ಗೆದ್ದ ಮನು ಭಾಕರ್

Last Updated 25 ಮಾರ್ಚ್ 2023, 13:15 IST
ಅಕ್ಷರ ಗಾತ್ರ

ಭೋಪಾಲ್‌: ಒಲಿಂಪಿಯನ್‌ ಶೂಟರ್ ಮನು ಭಾಕರ್‌ ಅವರು ಇ‌ಲ್ಲಿ ನಡೆಯುತ್ತಿರುವ ಐಎಸ್‌ಎಸ್‌ಎಫ್‌ ವಿಶ್ವಕಪ್‌ ಶೂಟಿಂಗ್‌ನಲ್ಲಿ ಕಂಚಿನ ಪದಕ ಗೆದ್ದುಕೊಂಡರು.

ಶನಿವಾರ ನಡೆದ ಮಹಿಳೆಯರ 25 ಮೀ. ಪಿಸ್ತೂಲ್‌ ವಿಭಾಗದಲ್ಲಿ ಅವರು ಈ ಸಾಧನೆ ಮಾಡಿದರು. ಇದರೊಂದಿಗೆ ಚಾಂಪಿಯನ್‌ಷಿಪ್‌ನಲ್ಲಿ ಭಾರತ ಗೆದ್ದ ಪದಕಗಳ ಸಂಖ್ಯೆ ಏಳಕ್ಕೆ ಏರಿಕೆಯಾಗಿದೆ.

ಮನು ಅವರು ಶುಕ್ರವಾರ ನಡೆದಿದ್ದ ಪ್ರಿಸಿಷನ್‌ ಸುತ್ತಿನಲ್ಲಿ 290 ಸ್ಕೋರ್‌ಗಳನ್ನು ಗಳಿಸಿ ರ್‍ಯಾಪಿಡ್‌ ಸುತ್ತಿಗೆ ಅರ್ಹತೆ ಪಡೆದುಕೊಂಡಿದ್ದರು. ಶನಿವಾರ ನಡೆದ ರ್‍ಯಾಪಿಡ್‌ ಹಂತದ ಮೂರು ಸುತ್ತುಗಳಲ್ಲಿ ಕ್ರಮವಾಗಿ 98, 99 ಮತ್ತು 97 ಪಾಯಿಂಟ್ಸ್‌ಗಳೊಂದಿಗೆ ಒಟ್ಟು 294 ಸ್ಕೋರ್‌ ಗಳಿಸಿ ರ‍್ಯಾಂಕಿಂಗ್‌ ಸುತ್ತಿಗೆ ಪ್ರವೇಶ ಗಿಟ್ಟಿಸಿಕೊಂಡರು.

ರ್‍ಯಾಂಕಿಂಗ್‌ ಸುತ್ತಿನಲ್ಲಿ ಸರಾಸರಿ 14 ಪಾಯಿಂಟ್ಸ್ ಕಲೆಹಾಕಿ ಮೂರನೆಯವರಾಗಿ ಪದಕ ಸುತ್ತಿಗೆ ಅರ್ಹತೆ ಗಳಿಸಿದರು. ಕಣದಲ್ಲಿದ್ದ ಭಾರತದ ಇನ್ನೊಬ್ಬ ಶೂಟರ್‌ ಇಶಾ ಸಿಂಗ್‌ ಅವರು ರ‍್ಯಾಂಕಿಂಗ್‌ ಸುತ್ತಿನಲ್ಲಿ ಹೊರಬಿದ್ದರು.

ಪದಕ ಸುತ್ತಿನಲ್ಲಿ ಮನು ಅವರು ಜರ್ಮನಿಯ ಡೊರೀನ್ ವೆನೆಕ್ಯಾಂಪ್, ಚೀನಾದ ಜಿಯು ದು ಮತ್ತು ಯಕ್ಸುವಾನ್ ಕ್ಸಿಯೊಂಗ್‌ ಜತೆ ಪೈಪೋಟಿ ನಡೆಸಿದರು.

ಕ್ರಮವಾಗಿ 30 ಮತ್ತು 29ರ ಸರಾಸರಿಯಲ್ಲಿ ಪಾಯಿಂಟ್ಸ್ ಗಳಿಸಿದ ಡೊರೀನ್‌ ಹಾಗೂ ಜಿಯು ದು ಅವರು ಚಿನ್ನ ಹಾಗೂ ಬೆಳ್ಳಿ ತಮ್ಮದಾಗಿಸಿಕೊಂಡರು. ಎದುರಾಳಿಗಳಿಗೆ ಸರಿಸಾಟಿಯಾಗಿ ನಿಲ್ಲಲು ವಿಫಲರಾದ ಮನು ಮೂರನೇ ಸ್ಥಾನ ಗಳಿಸಿದರು.

ಈ ಚಾಂಪಿಯನ್‌ಷಿಪ್‌ನಲ್ಲಿ ಮನು ಅವರಿಗೆ ದೊರೆತ ಮೊದಲ ಪದಕ ಇದು. ತಮ್ಮ ನೆಚ್ಚಿನ ಏರ್‌ ಪಿಸ್ತೂಲ್‌ ವಿಭಾಗದಲ್ಲಿ 16ನೇ ಸ್ಥಾನ ಪಡೆದು ನಿರಾಶೆ ಅನುಭವಿಸಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT