ಸೋಮವಾರ, ಏಪ್ರಿಲ್ 19, 2021
23 °C

ಏಷ್ಯನ್‌ ಚಾಂಪಿಯನ್‌ಷಿಪ್‌: ಬಾಕ್ಸಿಂಗ್‌ ತಂಡದಲ್ಲಿ ಮೇರಿ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಆರು ಬಾರಿಯ ವಿಶ್ವ ಚಾಂಪಿಯನ್ ಮೇರಿ ಕೋಮ್‌ ಅವರು ಏಷ್ಯನ್ ಬಾಕ್ಸಿಂಗ್‌ ಚಾಂಪಿಯನ್‌ಷಿಪ್‌ನಲ್ಲಿ ಭಾರತ ಮಹಿಳಾ ತಂಡವನ್ನು ಮುನ್ನಡೆಸಲಿದ್ದಾರೆ.

ನವದೆಹಲಿಯಲ್ಲಿ ಮೇ 21ರಿಂದ 31ರವರೆಗೆ ನಡೆಯಲಿರುವ ಚಾಂಪಿಯನ್‌ಷಿಪ್‌ನಲ್ಲಿ ಮೇರಿ 51 ಕೆಜಿ ವಿಭಾಗದಲ್ಲಿ ಕಣಕ್ಕಿಳಿಯಲಿದ್ದಾರೆ. ಏಷ್ಯನ್ ಚಾಂಪಿಯನ್‌ಷಿಪ್‌ಗಳಲ್ಲಿ ಇದುವರೆಗೆ ಅವರು ಆರು ಪದಕಗಳನ್ನು ಗೆದ್ದಿದ್ದು, ಅವುಗಳಲ್ಲಿ ಐದು ಚಿನ್ನ ಎಂಬುದು ಗಮನಾರ್ಹ. 2019ರ ಟೂರ್ನಿಯಿಂದ ಮೇರಿ ಹಿಂದೆ ಸರಿದಿದ್ದರು.

ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಎರಡು ಬಾರಿ ಕಂಚಿನ ಪದಕ ಗೆದ್ದುಕೊಂಡಿರುವ ಲವ್ಲಿನಾ ಬೊರ್ಗೊಹೈನ್‌ (69 ಕೆಜಿ) ಕೂಡ ತಂಡದಲ್ಲಿ ಸ್ಥಾನ ಗಳಿಸಿದ್ದಾರೆ.

ತಂಡ ಇಂತಿದೆ: ಮೋನಿಕಾ (48 ಕೆಜಿ), ಮೇರಿ ಕೋಮ್‌ (51 ಕೆಜಿ), ಸಾಕ್ಷಿ (54 ಕೆಜಿ), ಜಾಸ್ಮಿನ್‌ (57 ಕೆಜಿ), ಸಿಮ್ರನ್‌ಜೀತ್ ಕೌರ್‌ (60 ಕೆಜಿ), ಪ್ವಿಲಾವೊ ಬಾಸುಮತಾರಿ (64 ಕೆಜಿ), ಲವ್ಲಿನಾ ಬೊರ್ಗೊಹೈನ್‌ (69 ಕೆಜಿ), ಪೂಜಾ ರಾಣಿ (75 ಕೆಜಿ), ಸ್ವೀಟಿ (81 ಕೆಜಿ), ಅನುಪಮಾ (81+ ಕೆಜಿ).

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು