ಭಾರತ ಪುರುಷ ತಂಡಕ್ಕೆ ಸೋಲು

7
ಏಷ್ಯನ್‌ ಕ್ರೀಡಾಕೂಟ: ಹ್ಯಾಂಡ್‌ಬಾಲ್‌ ಸ್ಪರ್ಧೆಯ ಮೊದಲ ಪಂದ್ಯದಲ್ಲಿ ಚೀನಾ ತೈಪೆಗೆ ಜಯ

ಭಾರತ ಪುರುಷ ತಂಡಕ್ಕೆ ಸೋಲು

Published:
Updated:

ಜಕಾರ್ತ: ಭಾರತದ ಪುರುಷ ತಂಡವು ಏಷ್ಯನ್‌ ಕ್ರೀಡಾಕೂಟದ ಹ್ಯಾಂಡ್‌ಬಾಲ್‌ ಸ್ಪರ್ಧೆಯ ಮೊದಲ ಪಂದ್ಯದಲ್ಲಿ ನಿರಾಸೆ ಅನುಭವಿಸಿದೆ.

ಸೋಮವಾರ ಇಲ್ಲಿನ ಪೊಪ್ಕಿ ಕ್ರೀಡಾಂಗಣದಲ್ಲಿ ನಡೆದ ಡಿ ಗುಂಪಿನ ಪಂದ್ಯದಲ್ಲಿ ಭಾರತ ತಂಡವು 28–38ರಿಂದ ಚೀನಾ ತೈಪೆ ತಂಡದ ಎದುರು ಸೋತಿತು. 

ಪಂದ್ಯದ ಆರಂಭದಲ್ಲಿ ಉಭಯ ತಂಡಗಳ ನಡುವೆ ಸಮಬಲದ ಹೋರಾಟ ಕಂಡುಬಂತು. ಆದರೆ, ನಂತರದ ಅವಧಿಯಲ್ಲಿ ಎದುರಾಳಿ ತಂಡದ ತಂತ್ರಗಳಿಗೆ ಪ್ರತಿತಂತ್ರ ಹೆಣೆಯಲು ಭಾರತ ವಿಫಲವಾಯಿತು.  

ತನ್ನ ಎರಡನೇ ಪಂದ್ಯದಲ್ಲಿ ಭಾರತ ಪುರುಷ ತಂಡವು ಇರಾಕ್‌ ಅನ್ನು ಎದುರಿಸಲಿದೆ.

ಭಾರತದ ಮಹಿಳಾ ತಂಡವು ಎ ಗುಂಪಿನಲ್ಲಿ ಸ್ಥಾನ ಗಳಿಸಿದೆ. ಇದೇ ಗುಂಪಿನಲ್ಲಿ ದಕ್ಷಿಣ ಕೊರಿಯಾ, ಕಜಕಸ್ತಾನ, ಚೀನಾ ಹಾಗೂ ಉತ್ತರ ಕೊರಿಯಾ ತಂಡಗಳಿವೆ. ಇಂದು ನಡೆಯುವ ತನ್ನ ಮೊದಲ ಪಂದ್ಯದಲ್ಲಿ ಭಾರತ ತಂಡವು ಕಜಕಸ್ತಾನ ಎದುರು ಸೆಣಸಲಿದೆ. 

ಏಷ್ಯನ್‌ ಕ್ರೀಡಾಕೂಟಕ್ಕೆ ಇದೇ 18ರಿಂದ ಅಧಿಕೃತ ಚಾಲನೆ ಸಿಗಲಿದೆ. ಆದರೆ, ಹ್ಯಾಂಡ್‌ಬಾಲ್‌ ಹಾಗೂ ಫುಟ್‌ಬಾಲ್‌ ಕ್ರೀಡೆಯ ಲೀಗ್‌ ಹಂತದ ಪಂದ್ಯಗಳು ಸೋಮವಾರದಿಂದಲೇ ಆರಂಭವಾಗಿವೆ.

 

ಬರಹ ಇಷ್ಟವಾಯಿತೆ?

  • 0

    Happy
  • 0

    Amused
  • 0

    Sad
  • 0

    Frustrated
  • 0

    Angry

Comments:

0 comments

Write the first review for this !