ಸೋಮವಾರ, ಆಗಸ್ಟ್ 8, 2022
22 °C
ದಿಗ್ಗಜ ಅಥ್ಲೀಟ್‌ ಕುಟುಂಬದಿಂದ ಮಾಹಿತಿ

ಮಿಲ್ಖಾ ಸಿಂಗ್ ಆರೋಗ್ಯ ಸ್ಥಿರ: ಕೋವಿಡ್‌ ಐಸಿಯುನಿಂದ ಸ್ದಳಾಂತರ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಚಂಡೀಗಡ: ಭಾರತದ ದಿಗ್ಗಜ ಅಥ್ಲೀಟ್ ಮಿಲ್ಖಾ ಸಿಂಗ್ ಅವರ ಆರೋಗ್ಯ ಸ್ಥಿರವಾಗಿದೆ. ಕೋವಿಡ್‌ ತೀವ್ರ ನಿಗಾ ಘಟಕ ವಾರ್ಡ್‌ನಿಂದ ಅವರನ್ನು ಬೇರೆ ವಿಭಾಗಕ್ಕೆ ಸ್ಥಳಾಂತರ ಮಾಡಲಾಗಿದೆ ಎಂದು ಕುಟುಂಬದ ವಕ್ತಾರರು ಬುಧವಾರ ಹೇಳಿದ್ದಾರೆ.

ಕೊರೊನಾ ಸೋಂಕಿತರಾಗಿರುವ 91 ವರ್ಷದ ಮಿಲ್ಖಾ ಸಿಂಗ್, ಸದ್ಯ ಇಲ್ಲಿಯ ಪಿಜಿಐಎಂಇಆರ್‌ನಲ್ಲಿ (ವೈದ್ಯಕೀಯ ಶಿಕ್ಷಣ ಮತ್ತು ಸಂಶೋಧನೆ, ಸ್ನಾತಕೋತ್ತರ ಸಂಸ್ಥೆ) ಚಿಕಿತ್ಸೆ ಪಡೆಯುತ್ತಿದ್ದಾರೆ.

‘ಮಿಲ್ಖಾಜೀ ಅವರ ಆರೋಗ್ಯ ಸ್ಥಿರವಾಗಿದೆ. ಸದ್ಯ ಅವರನ್ನು ಕೋವಿಡ್‌ ಐಸಿಯುನಿಂದ ಸ್ಥಳಾಂತರ ಮಾಡಲಾಗಿದೆ. ಆದರೆ ವೈದ್ಯಕೀಯ ನಿಗಾದಲ್ಲಿದ್ದಾರೆ. ನಿಮ್ಮ ನಿರಂತರ ಪ್ರಾರ್ಥನೆ ಮತ್ತು ಶುಭಹಾರೈಕೆಗಳಿಗೆ ಕೃತಜ್ಞತೆಗಳು‘ ಎಂದು ಕುಟುಂಬದ ವಕ್ತಾರರು ತಿಳಿಸಿದ್ದಾರೆ.

‘ಮಿಲ್ಖಾ ಸಿಂಗ್ ಆರೋಗ್ಯವಾಗಿದ್ದು, ಚೇತರಿಸಿಕೊಳ್ಳುತ್ತಿದ್ದಾರೆ. ಕೋವಿಡ್‌ ಐಸಿಯುನಿಂದ ಸ್ಥಳಾಂತರಗೊಂಡ ಬಳಿಕ ಅವರ ಪರೀಕ್ಷಾ ವರದಿ ನೆಗೆಟಿವ್‌ ಬಂದಿದೆ‘ ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ.

ಮಿಲ್ಖಾ ಸಿಂಗ್ ಅವರ ಪತ್ನಿ, ಭಾರತ ಮಹಿಳಾ ವಾಲಿಬಾಲ್ ತಂಡದ ಮಾಜಿ ನಾಯಕಿ ನಿರ್ಮಲ್ ಕೌರ್ ಅವರು ಕೋವಿಡ್‌ನಿಂದಲೇ ಭಾನುವಾರ ನಿಧನರಾಗಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು