ಶುಕ್ರವಾರ, ನವೆಂಬರ್ 15, 2019
20 °C
ಇಂಗ್ಲೆಂಡ್‌ ಪ್ರವಾಸಕ್ಕೆ ಭಾರತ ವನಿತಾ ಹಾಕಿ ತಂಡ ಪ್ರಕಟ

ಮರಳಿದ ನಮಿತಾ ಟೊಪ್ಪೊ

Published:
Updated:
Prajavani

ನವದೆಹಲಿ: ಇಂಗ್ಲೆಂಡ್‌ ಪ್ರವಾಸ ಕೈಗೊಳ್ಳುವ ಭಾರತ ಮಹಿಳಾ ಹಾಕಿ ತಂಡವನ್ನು ಶುಕ್ರವಾರ ಪ್ರಕಟಿಸಲಾಗಿದೆ. ಗಾಯದ ಕಾರಣ ಹೊರಗುಳಿದಿದ್ದ ಮಿಡ್‌ಫೀಲ್ಡ್ ಆಟಗಾರ್ತಿ ನಮಿತಾ ಟೊಪ್ಪೊ ತಂಡಕ್ಕೆ ಮರಳಿದ್ದಾರೆ. ಸೆಪ್ಟೆಂಬರ್‌ 27ರಂದು ಮಾರ್ಲೊದಲ್ಲಿ ಆರಂಭವಾಗುವ ಐದು ಪಂದ್ಯಗಳ ಸರಣಿಗೆ ರಾಣಿ ರಾಂಪಾಲ್‌ ತಂಡದ ನಾಯಕತ್ವ ವಹಿಸಲಿರುವರು. 

ಅಕ್ಟೋಬರ್‌ 4ರಂದು ಸರಣಿ ಮುಕ್ತಾಯಗೊಳ್ಳಲಿದೆ. ಸವಿತಾ ಭಾರತ ತಂಡದ ಉಪನಾಯಕಿಯ ಜವಾಬ್ದಾರಿ ನಿಭಾಯಿಸುವರು. ರಜನಿ ಎತಿಮಾರ್ಪು ಸ್ಥಾನ ಉಳಿಸಿಕೊಂಡಿದ್ದಾರೆ. ಡಿಫೆಂಡರ್‌ಗಳಾದ ದೀಪ್‌ ಗ್ರೇಸ್‌ ಎಕ್ಕಾ, ಗುರ್ಜಿತ್‌ ಕೌರ್‌, ರೀನಾ ಖೋಕರ್‌ ಹಾಗೂ ಸಲೀಮಾ ಟೆಟೆ ಕೂಡ ತಂಡದಲ್ಲಿದ್ದಾರೆ. 

ಸುಶೀಲಾ ಚಾನು ಪುಖ್ರಂಬಮ್‌, ನಿಕ್ಕಿ ಪ್ರಧಾನ್‌, ಮೋನಿಕಾ, ನೇಹಾ ಗೋಯಲ್‌ ಹಾಗೂ ಲಿಲಿಮಾ ಮಿನ್ಜ್‌ ಕೂಡ ಮಿಡ್‌ಫೀಲ್ಡ್‌ ವಿಭಾಗದಲ್ಲಿ ಕಣಕ್ಕಿಳಿಯಲಿದ್ದಾರೆ. ಫಾವರ್ಡ್‌ನಲ್ಲಿ ನಾಯಕಿ ರಾಣಿ, ವಂದನಾ ಕಟಾರಿಯಾ, ನವನೀತ್‌ ಕೌರ್‌, ಲಾಲ್‌ರೆಮ್ಸಿಯಾಮಿ, ನವಜೋತ್‌ ಕೌರ್‌ ಹಾಗೂ ಯುವ ಆಟಗಾರ್ತಿ ಶರ್ಮಿಳಾ ದೇವಿ ಕಾಣಿಸಿಕೊಳ್ಳುವರು.

ತಂಡ ಇಂತಿದೆ: ಗೋಲುಕೀಪರ್ಸ್: ಸವಿತಾ (ಉಪನಾಯಕಿ), ರಜನಿ ಎತಿಮಾರ್ಪು

ಡಿಫೆಂಡರ್ಸ್: ದೀಪ್‌ ಗ್ರೇಸ್‌ ಎಕ್ಕಾ, ಗುರ್ಜಿತ್‌ ಕೌರ್‌, ರೀನಾ ಖೋಕರ್‌, ಸಲೀಮಾ ಟೆಟೆ.

ಮಿಡ್‌ಫೀಲ್ಡರ್ಸ್: ಸುಶೀಲಾ ಚಾನು ಪುಖ್ರಂಬಮ್‌, ನಿಕ್ಕಿ ಪ್ರಧಾನ್‌, ಮೋನಿಕಾ, ನೇಹಾ ಗೋಯಲ್‌, ಲಿಲಿಮಾ ಮಿನ್ಜ್‌, ನಮಿತಾ ಟೊಪ್ಪೊ

ಫಾವರ್ಡ್ಸ್: ರಾಣಿ(ನಾಯಕಿ), ವಂದನಾ ಕಟಾರಿಯಾ, ನವನೀತ್‌ ಕೌರ್‌, ಲಾಲ್‌ರೆಮ್ಸಿಯಾಮಿ, ನವಜೋತ್‌ ಕೌರ್‌, ಶರ್ಮಿಳಾ ದೇವಿ.

 

ಪ್ರತಿಕ್ರಿಯಿಸಿ (+)