4
ರಾಷ್ಟ್ರೀಯ ಅಥ್ಲೆಟಿಕ್ಸ್‌: ರಾಜ್ಯದ ‌ಅಥ್ಲೀಟ್‌ಗಳಿಗೆ ನಿರಾಸೆ

ಅನಾಸ್‌, ಹಿಮಾ ಮಿಂಚು

Published:
Updated:
ಮೊಹಮ್ಮದ್ ಅನಾಸ್‌

ಗುವಾಹಟಿ (ಪಿಟಿಐ): ಟ್ರ್ಯಾಕ್‌ನಲ್ಲಿ ಮಿಂಚು ಹರಿಸಿದ ಕೇರಳದ ಮೊಹಮ್ಮದ್ ಅನಾಸ್ ಮತ್ತು ಅಸ್ಸಾಂನ ಹಿಮಾ ದಾಸ್‌ ಇಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಬುಧ ವಾರ ಚಿನ್ನ ಗೆದ್ದರು.

200 ಮೀಟರ್ಸ್ ಓಟದಲ್ಲಿ ಇವರು ಕ್ರಮವಾಗಿ ಪುರುಷ ಮತ್ತು ಮಹಿಳಾ ವಿಭಾಗಗಳಲ್ಲಿ ಪ್ರಥಮ ಸ್ಥಾನ ಗಳಿಸಿದರು. ಅನಾಸ್‌, ತಮಿಳುನಾಡಿನ ಏಕಲವ್ಯ ದಾಸ್ ಅವರನ್ನು ಹಿಂದಿ ಕ್ಕಿದರೆ, ಹಿಮಾ ದಾಸ್‌ ಪ್ರಬಲ ಪ್ರತಿ ಸ್ಪರ್ಧಿ ದ್ಯುತಿ ಚಾಂದ್ ಅವರನ್ನು ಹಿಮ್ಮೆಟ್ಟಿಸಿದರು.

ಪುರುಷರ 200 ಮೀಟರ್ಸ್ ಓಟದ ಸ್ಪರ್ಧೆಯಲ್ಲಿ ರಾಜ್ಯದ ವಿದ್ಯಾಸಾಗರ್‌ ನಾಲ್ಕನೇ ಸ್ಥಾನ ಪಡೆದರು. ಅವರು 21.58 ಸೆಕೆಂಡುಗಳಲ್ಲಿ ಗುರಿ ಮುಟ್ಟಿ ದರು. ಮಹಿಳಾ ವಿಭಾಗದ 200 ಮೀಟರ್ಸ್ ಓಟದ ಸ್ಪರ್ಧೆಯಲ್ಲಿ ರಾಜ್ಯದ ರೀನಾ ಜಾರ್ಜ್‌ (24.27 ಸೆ) ಆರನೇ ಸ್ಥಾನ ಗಳಿಸಿದರು. 800 ಮೀಟರ್ಸ್ ಓಟದಲ್ಲಿ ರಾಜ್ಯದ ಮಿಜೊ ಚಾಕೊ ಕುರಿಯನ್‌ (1ನಿ 50.82 ಸೆ) ಆರನೇ ಸ್ಥಾನ ಗಳಿಸಿದರು.

ಫಲಿತಾಂಶಗಳು: ಪುರುಷರು: 200 ಮೀಟರ್ಸ್‌ ಓಟ: ಮೊಹಮ್ಮದ್ ಅನಾಸ್‌ (ಕೇರಳ)–1, ಏಕಲವ್ಯ ದಾಸನ್‌ (ತಮಿಳುನಾಡು)–2, ಪ್ರವೀಣ್ ಕುಮಾರ್‌ (ಹರಿಯಾಣ)–3. ಕಾಲ: 20.98 ಸೆಕೆಂಡು; 800 ಮೀಟರ್ಸ್ ಓಟ: ಜಿನ್ಸನ್ ಜಾನ್ಸನ್‌ (ಕೇರಳ)–1, ಮಂಜೀತ್ ಸಿಂಗ್‌ (ಹರಿ ಯಾಣ)–2, ಮೊಹಮ್ಮದ್‌ ಅಫ್ಸಲ್‌ (ಮಣಿಪುರ)–3. ಕಾಲ: 1ನಿ 45.65 ಸೆ. ಪೋಲ್‌ ವಾಲ್ಟ್‌: ಕುಂದನ್‌ (ಹರಿಯಾಣ)–1, ಶಿವಸುಬ್ರಮಣಿ (ತಮಿಳುನಾಡು)–2, ಅನೂಪ್‌ ಸಿ.ಬಿ (ಕೇರಳ)–3. ಎತ್ತರ: 5.10 ಮೀ. 

ಮಹಿಳೆಯರು: 200 ಮೀಟರ್ಸ್ ಓಟ: ಹಿಮಾ ದಾಸ್‌ (ಅಸ್ಸಾಂ)–1, ದ್ಯುತಿ ಚಾಂದ್‌ (ಒಡಿಶಾ)–2, ಶ್ರಬಾನಿ ನಂದ (ಒಡಿಶಾ)–3. ಕಾಲ: 23.10ಸೆ; 800 ಮೀ ಓಟ: ಕೋಮಲ್ ಚೌಧರಿ (ಹರಿಯಾಣ)–1, ಶಿಪ್ರಾ ಸರ್ಕಾರ್‌ (ಪಶ್ಚಿಮ ಬಂಗಾಳ)–2, ಅರ್ಚನಾ ಅಧವ್‌ (ಮಹಾರಾಷ್ಟ್ರ)–3. ಕಾಲ: 2:06.68 ನಿ.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !