ಶುಕ್ರವಾರ, ಫೆಬ್ರವರಿ 21, 2020
25 °C

ರಾಷ್ಟ್ರೀಯ ಟೇಬಲ್‌ ಟೆನಿಸ್‌ ಚಾಂಪಿಯನ್‌ಷಿಪ್‌: ಹರ್ಮಿತ್‌ ದೇಸಾಯಿ ಚಾಂಪಿಯನ್‌

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಹೈದರಾಬಾದ್‌: ಸೂರತ್‌ನ ಹರ್ಮಿತ್‌ ದೇಸಾಯಿ ರಾಷ್ಟ್ರೀಯ ಟೇಬಲ್‌ ಟೆನಿಸ್‌ ಚಾಂಪಿಯನ್‌ಷಿಪ್‌ನಲ್ಲಿ ಪ್ರಶಸ್ತಿ ಜಯಿಸಿದ್ದಾರೆ. ಭಾನುವಾರ ಇಲ್ಲಿ ನಡೆದ ಪುರುಷರ ಸಿಂಗಲ್ಸ್ ಫೈನಲ್‌ ಹಣಾಹಣಿಯಲ್ಲಿ ಅವರು ಮಾನವ್‌ ಠಕ್ಕರ್‌ ಅವರನ್ನು 4–3ರಿಂದ ಸೋಲಿಸಿದರು. ಹರ್ಮಿತ್‌ ಅವರಿಗೆ ಇದು ಮೊದಲ ರಾಷ್ಟ್ರೀಯ ಕಿರೀಟ.

ಮಹಿಳಾ ಸಿಂಗಲ್ಸ್‌ ವಿಭಾಗದ ಪ್ರಶಸ್ತಿ ಹರಿಯಾಣದ ಸುತೀರ್ಥಾ ಮುಖರ್ಜಿ ಪಾಲಾಯಿತು. ಅಂತಿಮ ಪಂದ್ಯದಲ್ಲಿ ಅವರು  4–0ಯಿಂದ ಪೆಟ್ರೊಲಿಯಂ ಸ್ಪೋರ್ಟ್ಸ್ ಪ್ರಮೊಷನ್‌ ಬೋರ್ಡ್‌ನ (ಪಿಎಸ್‌ಪಿಬಿ) ಕೃತ್ವಿಕಾ ಸಿನ್ಹಾ ರಾಯ್‌ ಅವರನ್ನು ಮಣಿಸಿದರು. ಸುತೀರ್ಥಾ ಅವರಿಗೆ ಇದು ಎರಡನೇ ರಾಷ್ಟ್ರೀಯ ಗರಿ.

2017ರಲ್ಲಿ ಅವರು ಚಾಂಪಿಯನ್‌ ಆಗಿದ್ದರು. ಮಹಿಳಾ ಡಬಲ್ಸ್ ಹಾಗೂ ತಂಡ ವಿಭಾಗದಲ್ಲಿ ಚಿನ್ನ ಅಲ್ಲದೆ ಮಿಶ್ರ ಡಬಲ್ಸ್‌ನಲ್ಲಿ ಬೆಳ್ಳಿ ಪದಕವನ್ನು ಸುತೀರ್ಥಾ ಗೆದ್ದುಕೊಂಡರು.

ಪುರುಷ ಹಾಗೂ ಮಹಿಳೆಯರ ಡಬಲ್ಸ್‌ ವಿಭಾಗಗಳ ಚಿನ್ನದ ಪದಕಗಳು ಹರಿಯಾಣ ತಂಡದ ಪಾಲಾದವು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು