ಬುಧವಾರ, ನವೆಂಬರ್ 13, 2019
21 °C

ಭಾರತದಲ್ಲಿ ಎನ್‌ಬಿಎ ಪಂದ್ಯ

Published:
Updated:

ಮುಂಬೈ: ಅಮೆರಿಕದ ದಿ ನ್ಯಾಷನಲ್ ಬ್ಯಾಸ್ಕೆಟ್‌ಬಾಲ್ ಅಸೋಸಿಯೇಷನ್ (ಎನ್‌ಬಿಎ) ಇದೇ ಮೊದಲ ಬಾರಿ ಭಾರತದಲ್ಲಿ ‘ಎನ್‌ಬಿಎ ಟೂರ್ನಿ’ಯ ಪಂದ್ಯಗಳನ್ನು ಆಡಿಸಲು ಮುಂದಾಗಿದೆ. 70 ಶಾಲೆಗಳ ಮೂರು ಸಾವಿರಕ್ಕೂ ಹೆಚ್ಚಿನ ವಿದ್ಯಾರ್ಥಿಗಳನ್ನು ಪಂದ್ಯ ವೀಕ್ಷಿಸಲು ಆಹ್ವಾನಿಸಲಾಗಿದೆ.

ಅಕ್ಟೋಬರ್ 4 ಮತ್ತು 5ರಂದು ಮುಂಬೈನಲ್ಲಿ ಪಂದ್ಯಗಳು ನಡೆಯಲಿದ್ದು ಸ್ಯಾಕ್ರಮೆಂಟೊ ಕಿಂಗ್ಸ್ ಮತ್ತು ಇಂಡಿಯಾನ ಪೇಸರ್ಸ್‌ ತಂಡಗಳು ಸೆಣಸಲಿವೆ. ರಿಲಯನ್ಸ್ ಫೌಂಡೇಷನ್‌ನ ಜೂನಿಯರ್ ಎನ್‌ಬಿಎ ಕಾರ್ಯಕ್ರಮದ ಅಡಿ ವಿದ್ಯಾರ್ಥಿಗಳನ್ನು ಇಲ್ಲಿಗೆ ಆಹ್ವಾನಿಸಲಾಗಿದೆ.

ಕಾರ್ಯಕ್ರಮದ ಅಂಗವಾಗಿ ಸಂವಾದ ಮತ್ತು ಮಹಿಳೆಯರಿಗಾಗಿ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸುವುದಕ್ಕೂ ಮುಂದಾಗಿರುವುದಾಗಿ ಎನ್‌ಬಿಎ ಉಪ ಆಯುಕ್ತ ಮಾರ್ಕ್ ತಾಟುಮ್ ತಿಳಿಸಿದ್ದಾರೆ.

ಪ್ರತಿಕ್ರಿಯಿಸಿ (+)