ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟೋಕಿಯೊ ಒಲಿಂಪಿಕ್ಸ್‌ಗೆ ನೀರಜ್‌ ಚೋಪ್ರಾ

Last Updated 29 ಜನವರಿ 2020, 19:30 IST
ಅಕ್ಷರ ಗಾತ್ರ

ಪೊಚೆಫ್‌ಸ್ಟ್ರೂಮ್‌, ದಕ್ಷಿಣ ಆಫ್ರಿಕಾ: ಭಾರತದ ತಾರಾ ಜಾವೆಲಿನ್‌ ಎಸೆತಗಾರ ನೀರಜ್‌ ಚೋಪ್ರಾ ಟೋಕಿಯೊ ಒಲಿಂಪಿಕ್ಸ್‌ಗೆ ಅರ್ಹತೆ ಗಳಿಸಿದ್ದಾರೆ. ಇಲ್ಲಿ ನಡೆದ ಅಥ್ಲೆಟಿಕ್ಸ್ ಸೆಂಟ್ರಲ್‌ ನಾರ್ತ್‌ ಈಸ್ಟ್‌ ಕೂಟದಲ್ಲಿ ಅವರು 87.86 ಮೀ. ದೂರ ಜಾವೆಲಿನ್‌ ಎಸೆದರು.

22 ವರ್ಷದ ನೀರಜ್‌, ಮೊಣಕೈ ಗಾಯದ ಕಾರಣ 2019ರ ವರ್ಷ ಆಟದಿಂದ ಸಂಪೂರ್ಣ ದೂರ ಇದ್ದರು. ಮಂಗಳವಾರ ಇಲ್ಲಿ ಅವರು ಒಲಿಂಪಿಕ್ಸ್‌ ಅರ್ಹತೆಗೆ ಬೇಕಾದ 85 ಮೀ. ಗಡಿ ದಾಟುವಲ್ಲಿ ಯಶಸ್ವಿಯಾದರು.

ಇದೇ ಕೂಟದಲ್ಲಿ ಭಾಗವಹಿಸಿದ್ದ ಭಾರತದ ಇನ್ನೋರ್ವ ಜಾವೆಲಿನ್‌ ಎಸೆತಗಾರ ರೋಹಿತ್‌ ಯಾದವ್‌ 77.61 ಮೀ.ದೂರ ಎಸೆದರು.

ಗಾಯದ ಹಿನ್ನೆಲೆಯಲ್ಲಿನೀರಜ್‌, ಐಎಎಫ್‌ ವಿಶ್ವ ಚಾಂಪಿಯನ್‌ಷಿಪ್‌, ಡೈಮಂಡ್‌ ಲೀಗ್‌ ಹಾಗೂ ಏಷ್ಯಾ ಚಾಂಪಿಯನ್‌ನಲ್ಲಿ ಕಣಕ್ಕಿಳಿದಿರಲಿಲ್ಲ. ಅವರು ಕೊನೆಯ ಬಾರಿ ಭಾಗವಹಿಸಿದ್ದು 2018ರ ಜಕಾರ್ತ ಏಷ್ಯನ್‌ ಕ್ರೀಡಾಕೂಟದಲ್ಲಿ. ಅಲ್ಲಿ 88.06 ದೂರ ಜಾವೆಲಿನ್‌ ಎಸೆಯುವ ಮೂಲಕ ರಾಷ್ಟ್ರೀಯ ದಾಖಲೆಯೊಂದಿಗೆ ಚಿನ್ನದ ಪದಕಕ್ಕೆ ಕೊರಳೊಡ್ಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT