ಸೋಮವಾರ, ನವೆಂಬರ್ 18, 2019
27 °C

ಪ್ರೀ ಕ್ವಾರ್ಟರ್‌ಗೆ ರಾಜ್ಯ ತಂಡಗಳು

Published:
Updated:

ಬೆಂಗಳೂರು: ಕರ್ನಾಟಕದ ಬಾಲಕರ ಮತ್ತು ಬಾಲಕಿಯರ ತಂಡದವರು ನವದೆಹಲಿಯ ಮೈತ್ರೇಯಿ ಕಾಲೇಜು ಮೈದಾನದಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಜೂನಿಯರ್‌ ನೆಟ್‌ಬಾಲ್‌ ಚಾಂಪಿಯನ್‌ಷಿಪ್‌ನಲ್ಲಿ ಪ್ರೀ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದ್ದಾರೆ.

ಶುಕ್ರವಾರ ನಡೆದ ತನ್ನ ಪಾಲಿನ ಎರಡನೇ ಲೀಗ್‌ ಪಂದ್ಯದಲ್ಲಿ ರಾಜ್ಯ ಬಾಲಕಿಯರ ತಂಡ 21–8 ಪಾಯಿಂಟ್ಸ್‌ನಿಂದ ಬಿಹಾರದ ಎದುರು ಗೆದ್ದಿತು.

ಬಾಲಕರ ವಿಭಾಗದ ಹಣಾಹಣಿಯಲ್ಲಿ ಕರ್ನಾಟಕ 23–13 ಪಾಯಿಂಟ್ಸ್‌ನಿಂದ ಚಂಡೀಗಡ ತಂಡವನ್ನು ಪರಾಭವಗೊಳಿಸಿತು.

ಹದಿನಾರರ ಘಟ್ಟದ ಪಂದ್ಯಗಳು ಶನಿವಾರ ನಡೆಯಲಿವೆ.

ಪ್ರತಿಕ್ರಿಯಿಸಿ (+)