ವಿಶ್ವಕಪ್ ಹಾಕಿ: ನೆದರ್ಲೆಂಡ್ಸ್ ವಿಶ್ವ ಚಾಂಪಿಯನ್‌

7

ವಿಶ್ವಕಪ್ ಹಾಕಿ: ನೆದರ್ಲೆಂಡ್ಸ್ ವಿಶ್ವ ಚಾಂಪಿಯನ್‌

Published:
Updated:
Deccan Herald

ಲಂಡನ್‌ : ನೆದರ್ಲೆಂಡ್ಸ್ ತಂಡ ಮಹಿಳಾ ವಿಶ್ವಕಪ್ ಹಾಕಿಯ ಚಾಂಪಿಯನ್ ಆಗಿ ಹೊರಹೊಮ್ಮಿತು. ಭಾನುವಾರ ರಾತ್ರಿ ಇಲ್ಲಿನ ಲೀ ವ್ಯಾಲಿ ಹಾಕಿ ಅಂಗಣದಲ್ಲಿ ನಡೆದ ಪಂದ್ಯದಲ್ಲಿ ಈ ತಂಡ ಐರ್ಲೆಂಡ್ ಎದುರು 6–0ಯಿಂದ ಗೆದ್ದಿತು.

ಹಿಂದಿನ 13 ವಿಶ್ವಕಪ್‌ಗಳಲ್ಲಿ ಒಟ್ಟು ಏಳು ಬಾರಿ ಪ್ರಶಸ್ತಿ ಗೆದ್ದು ನಾಲ್ಕು ಬಾರಿ ರನ್ನರ್ ಅಪ್ ಆಗಿದ್ದ  ನೆದರ್ಲೆಂಡ್ಸ್‌ ಈ ಬಾರಿ ಟೂರ್ನಿಯ ಆರಂಭದಲ್ಲೇ ಅಮೋಘ ಆಟವಾಡಿತ್ತು. ಗುಂಪು ಹಂತದ ಮೂರು ಪಂದ್ಯಗಳಲ್ಲಿ ಒಟ್ಟು 26 ಗೋಲುಗಳನ್ನು ಗಳಿಸಿತ್ತು.

ಇದೇ ಮೊದಲ ಬಾರಿ ಫೈನಲ್ ಪ್ರವೇಶಿಸಿದ್ದ ಐರ್ಲೆಂಡ್‌ ತಂಡಕ್ಕೆ ಫೈನಲ್‌ನಲ್ಲಿ ನೆದರ್ಲೆಂಡ್ಸ್‌ಗೆ ಸವಾಲೆಸೆಯಲು ಆಗಲಿಲ್ಲ. ಏಳನೇ ನಿಮಿಷದಲ್ಲಿ ಎಲ್ಟನ್ ಲಿಡ್ವಿಜ್ ಗಳಿಸಿದ ಗೋಲಿನ ಮೂಲಕ ಮುನ್ನಡೆ ಸಾಧಿಸಿದ ನೆದರ್ಲೆಂಡ್ಸ್‌ ಆಟಗಾರ್ತಿಯರು ಆಕ್ರಮಣಕಾರಿ ಆಟದ ಮೂಲಕ ಎದುರಾಳಿಗಳನ್ನು ಕಂಗೆಡಿಸಿದರು.

ಜಾಂಕರ್‌ ಕೆಲಿ (19ನೇ ನಿಮಿಷ), ವ್ಯಾನ್ ಮೇಲ್‌ ಕಿಟಿ (28), ಫೆನಿಕ್ಸ್‌ ಮಾಲೊವ್‌ (30), ಕೀಟೆಲ್ಸ್ ಮಾರ್ಲೋಸ್‌ (32) ಮತ್ತು ವ್ಯಾನ್‌ ಮಾಸ್ಕರ್ ಕಾಲಾ (34) ಗೋಲು ಗಳಿಸಿದರು.

ಸ್ಪೇನ್‌ಗೆ ಮೂರನೇ ಸ್ಥಾನ: ಆಸ್ಟ್ರೇಲಿಯಾವನ್ನು 3–1ರಿಂದ ಮಣಿಸಿದ ಸ್ಪೇನ್‌ ಕಂಚಿನ ಪದಕ ಗಳಿಸಿತು. ಲೋಪೆಜ್‌ ಮಾರಿಯಾ (11ನೇ ನಿಮಿಷ), ಬೊನಾಸ್ಟರ್ ಬರ್ಟಾ (14) ಮತ್ತು ಮಗಾಜ್ ಅಲೀಸಿಯಾ (51) ಸ್ಪೇನ್‌ ಪರ ಗೋಲು ಗಳಿಸಿದರು. ಆಸ್ಟ್ರೇಲಿಯಾಗೆ ಏಕೈಕ ಗೋಲು ಗಳಿಸಿಕೊಟ್ಟವರು ಸ್ಲೇಟರಿ ಕ್ಯಾಥರಿನ್‌ (40).

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !