ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಲಿಂಪಿಕ್‌ ಜ್ಯೋತಿ ಅನಾವರಣ

Last Updated 20 ಮಾರ್ಚ್ 2019, 18:49 IST
ಅಕ್ಷರ ಗಾತ್ರ

ಟೋಕಿಯೊ: ಇಲ್ಲಿ 2020ರಲ್ಲಿ ನಡೆಯಲಿರುವ ಒಲಿಂಪಿಕ್ ಕೂಟದ ಜ್ಯೋತಿಯನ್ನು ಬುಧವಾರ ಅನಾವರಣಗೊಳಿಸಲಾಯಿತು. ಅತ್ಯಾಧುನಿಕ ತಂತ್ರಜ್ಞಾನವನ್ನು ಬಿಂಬಿಸುವ ಜ್ಯೋತಿಯ ಮೇಲ್ತುದಿಯಲ್ಲಿ ಅರಳಿದ ಹೂಗಳನ್ನು ಹೋಳುವ ‘ಸಕುರಾ’ ಮಾದರಿಯನ್ನು ಕೆತ್ತಲಾಗಿದೆ.

ಗುಲಾಬಿ ಮತ್ತು ಚಿನ್ನ ಬಣ್ಣದ ಮಿಶ್ರಣವಿರುವ ಜ್ಯೋತಿ 71 ಸೆಂ.ಮೀ ಎತ್ತರವಿದ್ದು 1.2 ಕಿಲೋಗ್ರಾಂ ತೂಕವಿದೆ. 2011ರಲ್ಲಿ ಸಂಭವಿಸಿದ ಸುನಾಮಿಯಲ್ಲಿ ನಿರಾಶ್ರಿತರಾದವರಿಗೆ ನಿರ್ಮಿಸಿದ ತಾತ್ಕಾಲಿಕ ಮನೆಗಳಿಗಾಗಿ ಬಳಸಿ ಉಳಿದ ಅಲ್ಯುಮಿನಿಯಂ ಅನ್ನು ಇದಕ್ಕೆ ಬಳಸಲಾಗಿದೆ.

ಟೋಕಿಯೊ ಒಲಿಂಪಿಕ್ಸ್‌ ಜ್ಯೋತಿಯಾತ್ರೆ ಇದೇ ತಿಂಗಳ 26ರಂದು ಹೊರಡಲಿದೆ. 1964ರ ಟೋಕಿಯೊ ಒಲಿಂಪಿಕ್ಸ್‌ನ ಜ್ಯೋತಿ ಯಾತ್ರೆ ಆರಂಭಗೊಂಡ ಒಕಿನವಾವನ್ನು ಈ ಬಾರಿಯೂ ಉದ್ಘಾಟನೆಗೆ ಆಯ್ಕೆ ಮಾಡಲಾಗಿದೆ. ಜುಲೈ 10ರಂದು ರಾಜಧಾನಿಗೆ ಜ್ಯೋತಿ ತಲುಪಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT