ಸೋಮವಾರ, ಸೆಪ್ಟೆಂಬರ್ 16, 2019
27 °C

ಶೂಟಿಂಗ್: ಯಶಸ್ವಿನಿಗೆ ಒಲಿಂಪಿಕ್ಸ್‌ ರಹದಾರಿ

Published:
Updated:
Prajavani

ರಿಯೊ ಡಿ ಜನೈರೊ: ಭಾರತದ ಶೂಟಿಂಗ್ ಪಟು ಯಶಸ್ವಿನಿ ಸಿಂಗ್ ದೇಶ್ವಾಲ್ ಅವರು ಟೊಕಿಯೊದಲ್ಲಿ 2020ರಲ್ಲಿ ನಡೆಯುವ ಒಲಿಂಪಿಕ್ಸ್‌ನಲ್ಲಿ ಸ್ಪರ್ಧಿಸಲು ಅವಕಾಶ ಗಳಿಸಿದರು.

ಶನಿವಾರ  ಇಲ್ಲಿ ನಡೆದ ವಿಶ್ವಕಪ್ ಶೂಟಿಂಗ್‌ನಲ್ಲಿ ಅವರು ಮಹಿಳೆಯರ 10 ಮೀಟರ್ಸ್‌ ಏರ್ ಪಿಸ್ತೂಲ್ ವಿಭಾಗದಲ್ಲಿ ಚಿನ್ನದ ಪದಕ ಗೆದ್ದರು. ಇದರೊಂದಿಗೆ ಒಲಿಂಪಿಕ್ಸ್‌ಗೆ ಅರ್ಹತೆ ಗಳಿಸಿದ ಭಾರತದ ಒಂಬತ್ತನೇ ಶೂಟರ್ ಅವರಾದರು.

ಸಂಜೀವ್ ರಜಪೂತ್, ಅಂಜುಮ್ ಮೌದ್ಗಿಲ್, ಅಪೂರ್ವಿ ಚಾಂಡೇಲಾ, ಸೌರಭ್ ಚೌಧರಿ, ಅಭಿಷೇಕ್ ವರ್ಮಾ, ದಿವ್ಯಾಂಶ್ ಸಿಂಗ್ ಪನ್ವಾರ್, ರಾಹಿ ಸರ್ನೊಬತ್ ಮತ್ತು ಮನು ಭಾಕರ್ ಅವರು ಈಗಾಗಲೇ ಅರ್ಹತೆ ಗಿಟ್ಟಿಸಿದ್ದಾರೆ. ಈ ಸ್ಪರ್ಧೆಯಲ್ಲಿ ಅವರು ಉಕ್ರೇನ್‌ನ ಒಲೆನಾ  ಕೊಸ್ತಾವಿಚ್ ಮತ್ತು ಸರ್ಬಿಯಾದ ಜಸ್ಮಿನಾ ಮಿಲಾವೊನೊವಿಚ್ ಅವರನ್ನು ಹಿಂದಿಕ್ಕಿ ಮೊದಲಿಗರಾದರು.

Post Comments (+)