ಸೋಮವಾರ, ಮಾರ್ಚ್ 30, 2020
19 °C

ಒಮಾನ್‌ ಓಪನ್ ಟೇಬಲ್‌ ಟೆನಿಸ್‌ ಟೂರ್ನಿ: ಪ್ರಶಸ್ತಿ ಗೆದ್ದ ಜೀತ್‌

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಮಸ್ಕತ್‌: ಯುವ ವಿಭಾಗದಲ್ಲಿ ವಿಶ್ವದ ಎರಡನೇ ಕ್ರಮಾಂಕದ ಆಟಗಾರ ಮಾನವ್‌ ಠಕ್ಕರ್‌ ಅವರನ್ನು ನೇರ ಸೆಟ್‌ಗಳಿಂದ ಮಣಿಸಿದ ಉದಯೋನ್ಮುಖ ಆಟಗಾರ ಜೀತ್‌ ಚಂದ್ರ, ಒಮಾನ್‌ ಓಪನ್‌ ಟೇಬಲ್‌ ಟೆನಿಸ್‌ ಟೂರ್ನಿಯಲ್ಲಿ ಶನಿವಾರ 21 ವರ್ಷದೊಳಗಿನವರ ಪುರುಷರ ಸಿಂಗಲ್ಸ್‌ ಪ್ರಶಸ್ತಿ ಗೆದ್ದುಕೊಂಡರು.

ಭಾರತೀಯ ಆಟಗಾರರ ವ್ಯವಹಾರವಾಗಿದ್ದ ಫೈನಲ್‌ ಪಂದ್ಯದಲ್ಲಿ, ವಿಶ್ವದ 18ನೇ ಕ್ರಮಾಂಕದ ಆಟಗಾರ ಜೀತ್ 11–6, 11–7, 13–11 ರಿಂದ ಸೋಲಿಸಿದರು. ಜೀತ್‌ ಗೆಲುವಿಗೆ ತೆಗೆದುಕೊಂಡಿದ್ದು 24 ನಿಮಿಷಗಳನ್ನಷ್ಟೇ.

21 ವರ್ಷದೊಳಗಿನವರ ವಿಭಾಗದಲ್ಲಿ ಭಾರತದ ಆಟಗಾರರು ಪ್ರಾಬಲ್ಯ ಮೆರೆದರು. ಠಕ್ಕರ್‌, ಜೀತ್‌ ಚಂದ್ರ ಅವರ ಜೊತೆ ಸುರವಜ್ಜುಲ ಸ್ನೇಹಿತ್‌ ಸೆಮಿಫೈನಲ್‌ ತಲುಪಿದ್ದರು.

ಇದಕ್ಕೆ ಮೊದಲು ಸೀನಿಯರ್‌ ವಿಭಾಗದ ಪುರುಷರ ಸಿಂಗಲ್ಸ್‌ ಪ್ರಿಕ್ವಾರ್ಟರ್‌ಫೈನಲ್‌ ಪಂದ್ಯದಲ್ಲಿ ಭಾರತದ ಅಚಂತ ಶರತ್‌ ಕಮಲ್‌ 5–11, 11–5, 11–3, 11–5, 11–7 ರಿಂದ ಬೆಲಾರೂಸ್‌ನ ಅಲಿಯಕ್ಸಂಡರ್‌ ಖಾನಿನ್‌ ಅವರನ್ನು ಸೋಲಿಸಿದ್ದರು.

ರೋಚಕ ಹೋರಾಟ ಕಂಡ ಇನ್ನೊಂದು ಪಂದ್ಯದಲ್ಲಿ ಭಾರತದ ಹರ್ಮೀತ್‌ ದೇಸಾಯಿ 7–11, 11–13, 11–9, 11–6, 8–11, 11–5, 11–8 ರಿಂದ ಈಜಿಪ್ಟ್‌ನ ಒಮರ್‌ ಅಸ್ಸರ್‌ ಅವರನ್ನು ಸೋಲಿಸಿ ಎಂಟರ ಘಟ್ಟ
ತಲುಪಿದರು.

ಮಹಿಳಾ ಡಬಲ್ಸ್‌ ವಿಭಾಗದಲ್ಲಿ ಭಾರತದ ದಿಯಾ ಚಿತಾಳೆ– ಅರ್ಚನಾ ಕಾಮತ್ ಜೋಡಿ ಸೆಮಿಫೈನಲ್‌ಗೆ ತಲುಪಿತು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು