ಬುಧವಾರ, ಸೆಪ್ಟೆಂಬರ್ 22, 2021
27 °C

‘ಮಿಷನ್ ಒಲಿಂಪಿಕ್ಸ್‌ ವಿಂಗ್‌’: 450 ಕ್ರೀಡಾಪಟುಗಳಿಗೆ ಸೇನೆಯಲ್ಲಿ ತರಬೇತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ (ಪಿಟಿಐ): ಭಾರತೀಯ ಸೇನೆಯ ‘ಮಿಷನ್ ಒಲಿಂಪಿಕ್ಸ್‌ ವಿಂಗ್‌’ ಯೋಜನೆಯಡಿಯಲ್ಲಿ 450ಕ್ಕೂ ಹೆಚ್ಚು ಅಥ್ಲೀಟ್‌ಗಳಿಗೆ ತರಬೇತಿ ನೀಡಲಾಗುತ್ತಿದೆ.

ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಈಚೆಗೆ ಪುರುಷರ ಜಾವೆಲಿನ್ ಥ್ರೋನಲ್ಲಿ ಚಿನ್ದದ ಪದಕ ಜಯಿಸಿದ ನೀರಜ್ ಚೋಪ್ರಾ 2016ರ ಮೇ ತಿಂಗಳಲ್ಲಿ ಸೇನೆಗೆ ನೇಮಕವಾಗಿದ್ದರು. ಅವರು ಕೂಡ ಈ ಯೋಜನೆಯಲ್ಲಿ ತರಬೇತಿಗೊಳ್ಳಲು ಆಯ್ಕೆಯಾಗಿದ್ದರು.

ಒಟ್ಟು 11 ಕ್ರೀಡೆಗಳಲ್ಲಿ ಕ್ರೀಡಾಪಟುಗಳನ್ನು ತರಬೇತಿಗೊಳಿಸಲು ಸೇನೆಯು ಈ ಯೋಜನೆ ರೂಪಿಸಿದೆ. ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಸ್ಪರ್ಧಿಸಲು ಇಲ್ಲಿ ಸಿದ್ಧಗೊಳಿಸಲಾಗುತ್ತಿದೆ.

ಈ ಯೋಜನೆಯಲ್ಲಿ ಐದು ನಾಡ್‌ (ವಿಭಾಗಗಳು) ಇವೆ.  ರೋಯಿಂಗ್, ಶೂಟಿಂಗ್, ಈಕ್ವೆಸ್ಟ್ರಿಯನ್, ಸೇಲಿಂಗ್ ಮತ್ತು ಆರ್ಮಿ ಸ್ಪೋರ್ಟ್ಸ್‌ ಇನ್ಸ್‌ಟಿಟ್ಯೂಟ್ (ಎಎಸ್‌ಐ) ಇವೆ.

ಎಎಸ್‌ಐನಲ್ಲಿ 200ಕ್ಕೂ ಹೆಚ್ಚು ಅಥ್ಲೀಟ್‌ಗಳು ತರಬೇತಿ ಪಡೆಯುತ್ತಿದ್ದಾರೆ. ಅಲ್ಲಿ ಅಥ್ಲೆಟಿಕ್ಸ್‌, ಆರ್ಚರಿ, ಬಾಕ್ಸಿಂಗ್, ಕುಸ್ತಿ, ವೇಟ್‌ಲಿಫ್ಟಿಂಗ್, ಫೆನ್ಸಿಂಗ್ ಮತ್ತು ಡೈವಿಂಗ್ ಕ್ರೀಡೆಗಳಲ್ಲಿ ತರಬೇತಿ ನೀಡಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.

 ಶೂಟಿಂಗ್ (ಮಾರ್ಕ್ಸ್‌ಮನ್ ನಾಡ್) ವಿಭಾಗದಲ್ಲಿ 100, ರೋಯಿಂಗ್‌, ಸೇಲಿಂಗ್, ಈಕ್ವೆಸ್ಟ್ರಿಯನ್ ಗಳಲ್ಲಿ ಕ್ರಮವಾಗಿ 90, 50, 10 ಅಥ್ಲೀಟ್‌ಗಳು ಇದ್ದಾರೆ.

ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಸ್ಪರ್ಧಿಸಿದ ತಂಡದಲ್ಲಿ ಸೇನೆಯ 16 ಯೋಧರು ಇದ್ದರು. ಅದರಲ್ಲಿ ಸುಬೇದಾರ್ ನೀರಜ್ ಚೋಪ್ರಾ ಕೂಡ ಒಬ್ಬರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು