ಮಂಗಳವಾರ, ಫೆಬ್ರವರಿ 18, 2020
31 °C

ಹಂಟರ್ಸ್‌ಗೆ ಗೆಲುವು

ಪಿಟಿಐ Updated:

ಅಕ್ಷರ ಗಾತ್ರ : | |

ಹೈದರಾಬಾದ್‌: ತವರಿನ ಅಭಿಮಾನಿಗಳ ಎದುರು ಅಮೋಘ ಆಟ ಆಡಿದ ಹೈದರಾಬಾದ್‌ ಹಂಟರ್ಸ್‌ ತಂಡ ಪ್ರೀಮಿಯರ್‌ ಬ್ಯಾಡ್ಮಿಂಟನ್‌ ಲೀಗ್‌ (ಪಿಬಿಎಲ್‌) ಐದನೇ ಆವೃತ್ತಿಯ ಪಂದ್ಯದಲ್ಲಿ ಗೆಲುವು ದಾಖಲಿಸಿತು.

ಜಿ.ಎಂ.ಸಿ.ಬಾಲಯೋಗಿ ಒಳಾಂಗಣ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಹಣಾಹಣಿಯಲ್ಲಿ ಹಂಟರ್ಸ್‌ 4–3ಯಿಂದ ಮುಂಬೈ ರಾಕೆಟ್ಸ್‌ ತಂಡವನ್ನು ಸೋಲಿಸಿತು.

ಪುರುಷರ ಡಬಲ್ಸ್‌ ಮತ್ತು ಸಿಂಗಲ್ಸ್‌ (ಟ್ರಂಪ್‌) ಪಂದ್ಯಗಳಲ್ಲಿ ಗೆದ್ದ ರಾಕೆಟ್ಸ್‌ ತಂಡವು 3–0 ಮುನ್ನಡೆ ಪಡೆಯಿತು.

ಮಹಿಳೆಯರ ಸಿಂಗಲ್ಸ್‌ ವಿಭಾಗದ ‘ಟ್ರಂಪ್‌’ ಪಂದ್ಯದಲ್ಲಿ ಹಂಟರ್ಸ್‌ ತಂಡದ ಪಿ.ವಿ.ಸಿಂಧು 15–5, 15–10ರಲ್ಲಿ ಶ್ರೇಯಾಂಸಿ ಪರದೇಶಿ ಅವರನ್ನು ಮಣಿಸಿ ಹಿನ್ನಡೆಯನ್ನು 2–3ಕ್ಕೆ ತಗ್ಗಿಸಿದರು.

ನಂತರ ನಡೆದ ಪುರುಷರ ಎರಡನೇ ಸಿಂಗಲ್ಸ್‌ ಮತ್ತು ಮಿಶ್ರ ಡಬಲ್ಸ್‌ ಪಂದ್ಯಗಳಲ್ಲೂ ಮಿಂಚಿದ ಹಂಟರ್ಸ್‌ ತಂಡ ಗೆಲುವಿನ ತೋರಣ ಕಟ್ಟಿತು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)