ಶನಿವಾರ, ಜನವರಿ 18, 2020
20 °C

ಡಕಾರ್: ಪೌಲೊ ಸಾವು

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ರಿಯಾದ್ : ಹೀರೊ ಮೋಟೊಸ್ಪೋರ್ಟ್ಸ್‌ ತಂಡದ ಸವಾರ ಪೌಲೊ ಗೊಂಜಾಲ್ವೆಸ್ (40) ಡಕಾರ್ ರ‍್ಯಾಲಿಯ ಏಳನೇ ಸ್ಟೇಜ್‌ನ ಸ್ಪರ್ಧೆಯ ವೇಳೆ ಭಾನುವಾರ ನಡೆದ ಅಪಘಾತದಲ್ಲಿ ದುರ್ಮರಣ ಹೊಂದಿದರು.

‘ಬೆಳಿಗ್ಗೆ 10.08ಕ್ಕೆ  ಆಯೋಜಕರಿಗೆ ಅಪಘಾತದ ಸಂದೇಶ ಬಂದಿತು. 10.16ಕ್ಕೆ ಹೆಲಿಕಾಪ್ಟರ್‌ ಮೂಲಕ ವೈದ್ಯಕೀಯ ತಂಡವು ಅಪಘಾತ ಸ್ಥಳ ಮುಟ್ಟಿತು. ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಪೌಲೊ ಅವರನ್ನು ಲೈಲಾ ಆಸ್ಪತ್ರೆಗೆ ಹೆಲಿಕಾಪ್ಟರ್‌ ಮೂಲಕ ಕರೆದೊಯ್ಯಲಾಯಿತು. ಆದರೆ, ಹೃದಯಾಘಾತದಿಂದ ಅವರು ಅದಾಗಲೇ ಮರಣಿಸಿದ್ದರು’ ಎಂದು ಹೀರೊ ಮೋಟೊಸ್ಪೋರ್ಟ್ಸ್‌ ಪ್ರಕಟಣೆಯಲ್ಲಿ ತಿಳಿಸಿದೆ.

ಪೋರ್ಚುಗಲ್ ಮೂಲದ ಪೌಲೊ 2006ರಲ್ಲಿ ರೇಸ್ ಲೋಕಕ್ಕೆ ಪದಾರ್ಪಣೆ ಮಾಡಿದ್ದರು. ‘ಸ್ಪೀಡಿ ಗೊಂಜಾಲ್ವೆಸ್’ ಎಂದೇ ಖ್ಯಾತರಾಗಿದ್ದರು.

 

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು