ಪ್ಯಾರಾ ಬ್ಯಾಡ್ಮಿಂಟನ್: ಪ್ರಮೋದ್ ಭಗತ್‌ಗೆ ಜಯ

ಕಂಪಾಲಾ: ವಿಶ್ವದ ಅಗ್ರಶ್ರೇಯಾಂಕದ ಪ್ಯಾರಾ ಬ್ಯಾಡ್ಮೀಂಟನ್ ಆಟಗಾರ ಪ್ರಮೋದ್ ಭಗತ್ ಗುರುವಾರ ಉಗಾಂಡ ಅಂತರರಾಷ್ಟ್ರೀಯ ಪ್ಯಾರಾ ಬ್ಯಾಡ್ಮಿಂಟನ್ ಟೂರ್ನಿಯ ಪಂದ್ಯದಲ್ಲಿ ಜಯಿಸಿದರು.
ಪುರುಷರ ಸಿಂಗಲ್ಸ್‌ನಲ್ಲಿ ಪ್ರಮೋದ್ 21–13, 21–9ರಿಂದ ಐವರಿ ಕೋಸ್ಟ್ ಆಟಗಾರ ಡೀಡಾ ಜೀನ್ ಯವೆಸ್ ಯೋ ವಿರುದ್ಧ ಜಯಿಸಿದರು. ಎಸ್‌ಎಲ್3 ವಿಭಾಗದಲ್ಲಿ ಪ್ರಮೋದ್‌ಗೆ ಇದು ಎರಡನೇ ಜಯವಾಗಿದೆ.
ಮಿಶ್ರ ಡಬಲ್ಸ್ ಪಂದ್ಯದಲ್ಲಿ ಪ್ರಮೋದ್ ಮತ್ತು ಪಲಕ್ ಕೊಹ್ಲಿ 21–11, 21–12ರಿಂದ ಭಾರತದ ಶಾಂತಿಯಾ ವಿಶ್ವನಾಥನ್ ಮತ್ತು ಉಗಾಂಡದ ಬಶೀರ್ ಮುತೈಬಾ ವಿರುದ್ಧ ಜಯಿಸಿದರು.
ಎಸ್‌ಎಲ್4 ವಿಭಾಗದಲ್ಲಿ ಸುಕಾಂತ್ ಕದಮ್ 21–4, 21–5ರಿಂದ ನೈಜಿರಿಯಾದ ಒಸ್ಮಾನೆ ಹಾಬಿ ಅದಾಮಾವು ವಿರುದ್ಧ ಜಯಿಸಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.