ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರೊ ಕಬಡ್ಡಿ ಲೀಗ್‌: ಅರ್ಜುನ್‌ ದೇಸ್ವಾಲ್‌ ಮಿಂಚು

ಜೈಪುರ ಪಿಂಕ್ ಪ್ಯಾಂಥರ್ಸ್ ಜಯಭೇರಿ
Last Updated 19 ನವೆಂಬರ್ 2022, 20:53 IST
ಅಕ್ಷರ ಗಾತ್ರ

ಹೈದರಾಬಾದ್‌: ಅರ್ಜುನ್ ದೇಸ್ವಾಲ್ ಗಳಿಸಿದ ಅಮೋಘ 19 ಪಾಯಿಂಟ್ಸ್ ಬಲದಿಂದ ಜೈಪುರ ಪಿಂಕ್ ಪ್ಯಾಂಥರ್ಸ್ ತಂಡವು ಪ್ರೊ ಕಬಡ್ಡಿ ಲೀಗ್ ಟೂರ್ನಿಯಲ್ಲಿ ಭರ್ಜರಿ ಜಯ ಸಾಧಿಸಿತು.

ಇಲ್ಲಿನ ಗಚ್ಚಿಬೌಳಿ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಪಂದ್ಯದಲ್ಲಿ ಜೈಪುರ 42–29ರಿಂದ ಯುಪಿ ಯೋಧಾಸ್‌ ತಂಡವನ್ನು ಸೋಲಿಸಿತು.

ಪಂದ್ಯದ ಮೊದಲಾರ್ಧದ ವೇಳೆಗೆ ಜೈಪುರ 22–10ರಿಂದ ಮುಂದಿತ್ತು. ಅದೇ ಲಯದೊಂದಿಗೆ ಮುನ್ನುಗ್ಗಿ ಜಯ ಒಲಿಸಿಕೊಂಡಿತು.

ಯೋಧಾ ಪರ ಪ್ರದೀಪ್ ನರ್ವಾಲ್‌ ಗಳಿಸಿದ 14 ಪಾಯಿಂಟ್ಸ್ ವ್ಯರ್ಥವಾದವು.

ಇನ್ನೊಂದು ಪಂದ್ಯದಲ್ಲಿ ತೆಲುಗು ಟೈಟನ್ಸ್ ತಂಡವು 32-26ರಿಂದ ಯು ಮುಂಬಾ ವಿರುದ್ಧ ಗೆದ್ದಿತು.

ಇಂದಿನ ಪಂದ್ಯಗಳು
* ಹರಿಯಾಣ ಸ್ಟೀಲರ್ಸ್– ದಬಂಗ್ ಡೆಲ್ಲಿ
* ಬೆಂಗಳೂರು ಬುಲ್ಸ್–ಪುಣೇರಿ ಪಲ್ಟನ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT