ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರೊ ಕಬಡ್ಡಿ: ಗುಜರಾತ್ ಫಾರ್ಚೂನ್‌ ಜೈಂಟ್ಸ್‌ಗೆ ಜಯ

Last Updated 16 ನವೆಂಬರ್ 2018, 20:11 IST
ಅಕ್ಷರ ಗಾತ್ರ

ಮುಂಬೈ: ಗುಜರಾತ್ ಫಾರ್ಚೂನ್‌ ಜೈಂಟ್ಸ್‌ ತಂಡವು ಇಲ್ಲಿ ನಡೆಯುತ್ತಿರುವ ಪ್ರೊ ಕಬಡ್ಡಿ ಟೂರ್ನಿಯಲ್ಲಿ ಶುಕ್ರವಾರ ಬೆಂಗಾಲ್ ವಾರಿಯರ್ಸ್‌ ತಂಡದ ಎದುರು ಗೆದ್ದಿತು.

ಕೆ. ಪ್ರಪಂಜನ್ ಮತ್ತು ಅಜಯ ಕುಮಾರ್ ಅವರ ಅಮೋಘ ಅಟದ ಬಲದಿಂದ ಫಾರ್ಚೂನ್‌ ಜೈಂಟ್ಸ್‌ ತಂಡವು 35–23ರಿಂದ ಬೆಂಗಾಲ್ ತಂಡವನ್ನು ಮಣಿಸಿತು.

ಪಂದ್ಯದ ಮೊದಲರ್ಧವು ರೋಚಕ ವಾಗಿತ್ತು. ಫಾರ್ಚೂನ್ ತಂಡದ ಪ್ರಪಂಚನ್ ಅವರು ಎಂಟು ರೇಡ್ ಪಾಯಿಂಟ್ಸ್ ಮತ್ತು ಒಂದು ಬೋನಸ್ ಪಾಯಿಂಟ್ ಗಳಿಸಿದರು.

ಅಜಯಕುಮಾರ್ ಅವರು ರೇಡಿಂಗ್‌ನಲ್ಲಿ ಐದು ಮತ್ತು ಒಂದು ಟ್ಯಾಕಲ್ ಪಾಯಿಂಟ್ ಗಳಿಸಿ ತಂಡಕ್ಕೆ ನೆರವಾದರು. ಬೆಂಗಾಲ್ ತಂಡದ ಮಣಿಂದರ್ ಸಿಂಗ್ ಮೂರು ರೇಡ್ ಮತ್ತು ಮೂರು ಬೋನಸ್ ಪಾಯಿಂಟ್ ಗಳಿಸಿ ಮಿಂಚಿದರು. ಲೀ ಜಾಂಗ್ ಕುನ್ ಅವರೂ ತಮ್ಮ ಚುರುಕಿನ ಆಟದ ಮೂಲಕ ಐದು ಪಾಯಿಂಟ್ಸ್‌ ಗಳಿಸಿ ಪ್ರೇಕ್ಷಕರ ಮನಗೆದ್ದರು.

ಫಾರ್ಚೂನ್ ತಂಡವು 9 ಪಂದ್ಯಗಳಲ್ಲಿ ಏಳರಲ್ಲಿ ಗೆದ್ದಿದೆ. ಒಟ್ಟು 39 ಪಾಯಿಂಟ್‌್ಗಳೊಂದಿಗೆ ಎ ಗುಂಪಿನಲ್ಲಿ ಎರಡನೇ ಸ್ಥಾನದಲ್ಲಿದೆ.

ಬಿ ಗುಂಪಿನಲ್ಲಿ ಬೆಂಗಾಲ್ ತಂಡವು ಐದನೇ ಸ್ಥಾನದಲ್ಲಿದೆ. 10 ಪಂದ್ಯಗಳಲ್ಲಿ ಕೇವಲ ನಾಲ್ಕರಲ್ಲಿ ಜಯ ಸಾಧಿಸಿದೆ.

ದಿನದ ಇನ್ನೊಂದು ಪಂದ್ಯದಲ್ಲಿ ಜೈಪುರ ಪಿಂಕ್‌ಪ್ಯಾಂಥರ್ಸ್‌ 45–28 ಪಾಯಿಂಟ್ಸ್‌ನಿಂದ ಯು.ಪಿ.ಯೋಧಾ ತಂಡವನ್ನು ಪರಾಭವಗೊಳಿ
ಸಿತು. ಪ್ಯಾಂಥರ್ಸ್‌ ತಂಡದ ದೀಪಕ್‌ ಹೂಡಾ 10 ಪಾಯಿಂಟ್ಸ್‌ ಗಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT