ಗುರುವಾರ , ಫೆಬ್ರವರಿ 25, 2021
19 °C

ಟೈಟನ್ಸ್‌– ಯೋಧಾ ಪಂದ್ಯ ‘ಟೈ’

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಮುಂಬೈ: ತೆಲುಗು ಟೈಟನ್ಸ್‌ ಮತ್ತು ಯು.ಪಿ.ಯೋಧಾ ನಡುವೆ ಶುಕ್ರವಾರ ನಡೆದ ಪ್ರೊ ಕಬಡ್ಡಿ ಲೀಗ್‌ ಪಂದ್ಯ 20–20 ರೋಚಕ ‘ಡ್ರಾ’ದಲ್ಲಿ ಅಂತ್ಯಗೊಂಡಿತು. ಪಂದ್ಯದ ಅಂತಿಮ ಕ್ಷಣದಲ್ಲಿ ದೊರೆತ ತಾಂತ್ರಿಕ ಪಾಯಿಂಟ್‌ನಿಂದ ಯು.ಪಿ.ಯೋಧಾ ಸಮಬಲ ಮಾಡಿಕೊಳ್ಳಲು ಸಾಧ್ಯವಾಯಿತು.

ಕೊನೆಯ 30 ಸೆಕೆಂಡು ಉಳಿದಿ ದ್ದಾಗ ಪಂದ್ಯ 19–19ರಲ್ಲಿ ಸಮನಾಗಿತ್ತು. 

ಇನ್ನೊಂದು ಪಂದ್ಯದಲ್ಲಿ ಯು ಮುಂಬಾ 32–20 ಪಾಯಿಂಟ್ಸ್‌ನಿಂದ ಫಾರ್ಚೂನ್‌ ಜೈಂಟ್ಸ್‌ ತಂಡವನ್ನು ಸೋಲಿಸಿತು. ಇದು ಗುಜರಾತ್‌ನ ತಂಡಕ್ಕೆ ಲೀಗ್‌ನ ಮೊದಲ ಸೋಲು.

ಶನಿವಾರದ ಪಂದ್ಯ: ಪಟ್ನಾ ಪೈರೇಟ್ಸ್‌– ಪಿಂಕ್‌ ಪ್ಯಾಂಥರ್ಸ್‌ (ರಾತ್ರಿ 7.30), ಬೆಂಗಾಲ್‌ ವಾರಿಯರ್ಸ್‌– ಬೆಂಗಳೂರು ಬುಲ್ಸ್‌ (8.30).

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು