ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರೊ ಕಬಡ್ಡಿ ಲೀಗ್‌: ತಲೈವಾಸ್‌ ವಿರುದ್ಧ ಜಯ, ಅಗ್ರಸ್ಥಾನಕ್ಕೇರಿದ ಬುಲ್ಸ್

Last Updated 13 ನವೆಂಬರ್ 2022, 20:59 IST
ಅಕ್ಷರ ಗಾತ್ರ

ಪುಣೆ: ರೇಡರ್‌ಗಳಾದ ವಿಕಾಸ್‌ ಖಂಡೋಲ ಮತ್ತು ಭರತ್‌ ಅವರ ಮಿಂಚಿನ ಆಟದ ಬಲದಿಂದ ಬೆಂಗಳೂರು ಬುಲ್ಸ್‌ ತಂಡ ಪ್ರೊ ಕಬಡ್ಡಿ ಲೀಗ್‌ನಲ್ಲಿ ತಮಿಳ್‌ ತಲೈವಾಸ್‌ ತಂಡವನ್ನು 40–34 ರಲ್ಲಿ ಮಣಿಸಿತು.

ಬಾಳೇವಾಡಿಯ ಶಿವಛತ್ರಪತಿ ಕ್ರೀಡಾ ಸಂಕೀರ್ಣದಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ವಿಕಾಸ್‌ 17 ಹಾಗೂ ಭರತ್‌ 14 ಪಾಯಿಂಟ್ಸ್ ಗಳಿಸಿದರು. ಈ ಗೆಲುವಿನ ಮೂಲಕ ಬುಲ್ಸ್‌ 13 ಪಂದ್ಯಗಳಿಂದ 46 ಪಾಯಿಂಟ್ಸ್‌ಗಳೊಂದಿಗೆ ಮತ್ತೆ ಅಗ್ರಸ್ಥಾನಕ್ಕೇರಿತು.

ಪ್ರಥಮಾರ್ಧ ಕೊನೆಗೊಂಡಾಗ 18–19 ರಲ್ಲಿ ಹಿನ್ನಡೆಯಲ್ಲಿಬುಲ್ಸ್‌ ತಂಡ ಎರಡನೇ ಅವಧಿಯಲ್ಲಿ ಪುಟಿದೆದ್ದು ನಿಂತಿತು. ವಿಕಾಸ್‌ ಮತ್ತು ಭರತ್‌ ಅವರನ್ನು ಕಟ್ಟಿಹಾಕಲು ಎದುರಾಳಿ ತಂಡದವರು ವಿಫಲರಾದರು. ತಲೈವಾಸ್‌ ತಂಡದ ನರೇಂದರ್‌ 10 ಪಾಯಿಂಟ್ಸ್‌ ಗಳಿಸಿದರು.

ಮುಂಬಾಗೆ ಗೆಲುವು: ದಿನದ ಮೊದಲ ಪಂದ್ಯದಲ್ಲಿ ಯು ಮುಂಬಾ 36–23 ರಲ್ಲಿ ಪಟ್ನಾ ಪೈರೇಟ್ಸ್‌ ತಂಡವನ್ನು ಮಣಿಸಿತು. ಇದರೊಂದಿಗೆ ಪೈರೇಟ್ಸ್‌ ತಂಡದ ಸತತ ಐದು ಪಂದ್ಯಗಳ ಗೆಲುವಿನ ಓಟಕ್ಕೆ ತೆರೆಬಿತ್ತು.

13 ಪಾಯಿಂಟ್ಸ್ ಗಳಿಸಿದ ಗುಮಾನ್‌ ಸಿಂಗ್‌ ಅವರು ಮುಂಬಾ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಆಶೀಶ್‌ 6 ಹಾಗೂ ರಿಂಕು 4 ಪಾಯಿಂಟ್ಸ್‌ ಗಳಿಸಿದರು. ಪ್ರಥಮಾರ್ಧದಲ್ಲಿ ಮುಂಬಾ 18–13 ರಲ್ಲಿ ಮುನ್ನಡೆ ಸಾಧಿಸಿತ್ತು. ಹಿಂದಿನ ಪಂದ್ಯಗಳಲ್ಲಿ ಪೈರೇಟ್ಸ್‌ ಪರ ಮಿಂಚಿದ್ದ ರೋಹಿತ್‌ ಗುಲಿಯಾ ಮತ್ತು ಸಚಿನ್‌ ಕ್ರಮವಾಗಿ 7 ಹಾಗೂ ಪಾಯಿಂಟ್ಸ್‌ ತಂದುಕೊಟ್ಟರು.

ಇಂದಿನ ಪಂದ್ಯಗಳು
* ಬೆಂಗಾಲ್ ವಾರಿಯರ್ಸ್‌– ಪುಣೇರಿ ಪಲ್ಟನ್
* ಗುಜರಾತ್‌ ಜೈಂಟ್ಸ್‌– ಹರಿಯಾಣ ಸ್ಟೀಲರ್ಸ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT