ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾಕಿ | ಪಿಎಸ್‌ಬಿ, ರೈಲ್ವೇಸ್‌ಗೆ ಭರ್ಜರಿ ಗೆಲುವು

ಅಂತರ ಇಲಾಖೆಗಳ ರಾಷ್ಟ್ರೀಯ ಹಾಕಿ ಚಾಂಪಿಯನ್‌ಷಿಪ್‌: ಗಗನ್‌ಪ್ರೀತ್ ಸಿಂಗ್ ಹ್ಯಾಟ್ರಿಕ್‌
Last Updated 23 ಡಿಸೆಂಬರ್ 2021, 14:06 IST
ಅಕ್ಷರ ಗಾತ್ರ

ಬೆಂಗಳೂರು: ಪಂಜಾಬ್ ಆ್ಯಂಡ್ ಸಿಂಡ್ ಬ್ಯಾಂಕ್‌ (ಪಿಎಸ್‌ಬಿ) ಹಾಗೂ ರೈಲ್ವೆ ಸ್ಪೋರ್ಟ್ಸ್ ಪ್ರಮೋಷನ್ ಬೋರ್ಡ್‌ (ಆರ್‌ಎಸ್‌ಪಿಬಿ) ತಂಡಗಳು ನಗರದಲ್ಲಿ ನಡೆಯುತ್ತಿರುವ ಅಂತರ ಇಲಾಖೆಗಳ ರಾಷ್ಟ್ರೀಯ ಹಾಕಿ ಚಾಂಪಿಯನ್‌ಷಿಪ್‌ನಲ್ಲಿ ಭರ್ಜರಿ ಜಯ ಗಳಿಸಿದವು.

‘ಡಿ’ ಗುಂಪಿನ ಪಂದ್ಯದಲ್ಲಿ ಪಂಜಾಬ್ ಆ್ಯಂಡ್ ಸಿಂಡ್ ಬ್ಯಾಂಕ್, ತಿಮಿಳುನಾಡು ಪೊಲೀಸ್ ತಂಡವನ್ನು 8–1ರಲ್ಲಿ ಮಣಿಸಿತು. ಗಗನ್‌ಪ್ರೀತ್‌ ಸಿಂಗ್ 3ನೇ ನಿಮಿಷದಲ್ಲೇ ಗೋಲು ಗಳಿಸಿ ಮುನ್ನಡೆ ತಂದುಕೊಟ್ಟರು. 9 ಮತ್ತು 27ನೇ ನಿಮಿಷಗಳಲ್ಲಿ ಚೆಂಡನ್ನು ಗುರಿ ಸೇರಿಸಿದ ಅವರು ಮುನ್ನಡೆಯನ್ನು 3–0ಗೆ ಏರಿಸುವುದರೊಂದಿಗೆ ಹ್ಯಾಟ್ರಿಕ್ ಪೂರೈಸಿದರು.

35ನೇ ನಿಮಿಷದಲ್ಲಿ ಹರ್ಮನ್‌ಜಿತ್ ಸಿಂಗ್, 44ನೇ ನಿಮಿಷದಲ್ಲಿ ಮಣಿಂದರ್ ಸಿಂಗ್, 52ನೇ ನಿಮಿಷದಲ್ಲಿ ಪ್ರಿನ್ಸ್‌, 54ನೇ ನಿಮಿಷದಲ್ಲಿ ನಾಯಕ ಸತ್‌ಬೀರ್ ಸಿಂಗ್ ಮತ್ತು 55ನೇ ನಿಮಿಷದಲ್ಲಿ ಪ್ರಭ್‌ಜೋತ್ ಸಿಂಗ್ ಗೋಲು ಗಳಿಸಿದರು. ಎದುರಾಳಿ ತಂಡದ ಏಕೈಕ ಗೋಲು 59ನೇ ನಿಮಿಷದಲ್ಲಿ ಬಾಲಮುರುಗನ್ ಅವರಿಂದ ಬಂತು.

‘ಸಿ’ ಗುಂಪಿನ ಪಂದ್ಯದಲ್ಲಿ ಭಾರತ ಆಹಾರ ನಿಗಮವನ್ನು ರೈಲ್ವೇಸ್ 7–1ರಲ್ಲಿ ಸೋಲಿಸಿತು. ರೈಲ್ವೇಸ್‌ಗಾಗಿ ಶೇಷ ಗೌಡ ಬಿ.ಎಂ 5ನೇ ನಿಮಿಷದಲ್ಲಿ ಮೊದಲ ಗೋಲು ಗಳಿಸಿದರು. 10 ಮತ್ತು 15ನೇ ನಿಮಿಷಗಳಲ್ಲಿ ರಾಜು ಪಾಲ್‌, 18ನೇ ನಿಮಿಷದಲ್ಲಿ ಪ್ರದೀಪ್ ಸಿಂಗ್‌, 34ನೇ ನಿಮಿಷದಲ್ಲಿ ಅಜಿತ್ ಕುಮಾರ್ ಪಾಂಡೆ, 41ನೇ ನಿಮಿಷದಲ್ಲಿ ಜಸ್‌ಜಿತ್ ಸಿಂಗ್‌ ಗೋಲು ಗಳಿಸಿದರು. 45ನೇ ನಿಮಿಷದಲ್ಲಿ ಶೇಷಗೌಡ ಮತ್ತೊಮ್ಮೆ ಮಿಂಚಿದರು. 54ನೇ ನಿಮಿಷದಲ್ಲಿ ಅಜ್ಮೀರ್ ಸಿಂಗ್‌ ಕೊನೆಯ ಗೋಲು ಗಳಿಸಿದರು. ಆಹಾರ ನಿಗಮದ ಪರ 18ನೇ ನಿಮಿಷದಲ್ಲಿ ಹನ್ಸ್‌ರಾಜ್ ಗೋಲು ಗಳಿಸಿದರು.

‘ಬಿ’ ಗುಂಪಿನ ಪಂದ್ಯದಲ್ಲಿ ಕೆನರಾ ಬ್ಯಾಂಕ್‌ 5–0ಯಿಂದ ಸ್ಟೀಲ್ ಪ್ಲಾಂಟ್ ಸ್ಪೋರ್ಟ್ಸ್‌ ಬೋರ್ಡ್ ವಿರುದ್ಧ ಗೆದ್ದಿತು. ಸರ್ವಿಸಸ್ ಸ್ಪೋರ್ಟ್ಸ್ ಕಂಟ್ರೋಲ್ ಬೋರ್ಡ್‌ ‘ಎ’ ಗುಂಪಿನ ಪಂದ್ಯದಲ್ಲಿ ಐಟಿಬಿಪಿಯನ್ನು 3–0ಯಿಂದ ಸೋಲಿಸಿತು. ಸರೀನ್ ಎಡವಳತ್ತ್ (5, 26ನೇ ನಿಮಿಷ), ಪವನ್ ರಾಜ್‌ಬೀರ್‌ (27ನೇ ನಿ) ಗೋಲು ಗಳಿಸಿದರು. ಪಂಜಾಬ್ ನ್ಯಾಷನಲ್ ಬ್ಯಾಂಕ್‌ 2–1ರಲ್ಲಿ ಭಾರತ ಕ್ರೀಡಾ ಪ್ರಾಧಿಕಾರವನ್ನು ಮಣಿಸಿತು. ಎಂ.ಇಳಂಪರಿ (9ನೇ ನಿ), ಸುಖ್‌ಜಿತ್‌ ಸಿಂಗ್ (56ನೇ ನಿ) ಪಿಎನ್‌ಬಿ ಪರ ಗೋಲು ಗಳಿಸಿದರೆ ನವೀನ್ (33ನೇ ನಿ) ಚೆಂಡನ್ನು ಗುರಿಮುಟ್ಟಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT