ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಡಬ್ಲ್ಯುಎಫ್‌ ಅಥ್ಲೀಟ್‌ಗಳ ಆಯೋಗಕ್ಕೆ ಪಿ.ವಿ. ಸಿಂಧು ನೇಮಕ

Last Updated 20 ಡಿಸೆಂಬರ್ 2021, 16:12 IST
ಅಕ್ಷರ ಗಾತ್ರ

ನವದೆಹಲಿ: ಎರಡು ಬಾರಿಯ ಒಲಿಂಪಿಕ್ಸ್ ಪದಕ ವಿಜೇತೆ, ಭಾರತದ ಪಿ.ವಿ. ಸಿಂಧು ಅವರು ಸೋಮವಾರ ವಿಶ್ವ ಬ್ಯಾಡ್ಮಿಂಟನ್ ಫೆಡರೇಷನ್‌ (ಬಿಡಬ್ಲ್ಯುಎಫ್‌) ಅಥ್ಲೀಟ್‌ಗಳ ಆಯೋಗದ ಸದಸ್ಯೆಯಾಗಿ ನೇಮಕವಾಗಿದ್ದಾರೆ.

ಮಾಜಿ ವಿಶ್ವ ಚಾಂಪಿಯನ್‌, 26 ವರ್ಷದ ಸಿಂಧು ಸೇರಿ ಆರು ಮಂದಿ ಆಯೋಗಕ್ಕೆ ನೇಮಕವಾಗಿದ್ದು, 2025ರವರೆಗೆ ಇವರ ಅಧಿಕಾರಾವಧಿ ಇರಲಿದೆ.

2021-2025ರ ಅವಧಿಗೆ ಅಥ್ಲೀಟ್‌ಗಳ ಆಯೋಗಕ್ಕೆ ಐರಿಸ್ ವಾಂಗ್ (ಅಮೆರಿಕ), ರಾಬಿನ್ ಟೇಬೆಲಿಂಗ್ (ನೆದರ್ಲೆಂಡ್ಸ್), ಗ್ರೇಸಿಯಾ ಪೋಲಿ (ಇಂಡೊನೇಷ್ಯಾ), ಕಿಮ್ ಸೊಯೊಂಗ್ (ಕೊರಿಯಾ), ಪಿ.ವಿ. ಸಿಂಧು (ಭಾರತ), ಜೆಂಗ್‌ ಸಿ ವೇ (ಚೀನಾ) ಅವರನ್ನು ನೇಮಿಸಲಾಗಿದೆ‘ ಎಂದು ಬಿಡಬ್ಲ್ಯುಎಫ್‌ ಹೇಳಿದೆ.

ಈ ಆರು ಸದಸ್ಯರಲ್ಲಿ ಇಬ್ಬರನ್ನು ಅಧ್ಯಕ್ಷ ಮತ್ತು ಉಪಾಧ್ಯಕ್ಷರಾಗಿ ಶೀಘ್ರ ಆಯ್ಕೆ ಮಾಡಲಾಗುತ್ತದೆ ಎಂದು ಫೆಡರೇಷನ್ ತಿಳಿಸಿದೆ.

2016ರ ರಿಯೊ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಪದಕ ಗೆದ್ದಿದ್ದ ಸಿಂಧು, ಈ ವರ್ಷದ ಆರಂಭದಲ್ಲಿ ನಡೆದ ಟೋಕಿಯೊ ಕೂಟದಲ್ಲಿ ಕಂಚಿನ ಪದಕ ಜಯಿಸಿ ಇತಿಹಾಸ ನಿರ್ಮಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT