ಭಾನುವಾರ, ಮಾರ್ಚ್ 26, 2023
24 °C

ಕಾಂಜೀವರಂ ಲೆಹೆಂಗಾದಲ್ಲಿ ಪಿ.ವಿ. ಸಿಂಧು ಮಸ್ತ್ ನೃತ್ಯ: ವಿಡಿಯೊ ವೈರಲ್

ಪ್ರಜಾವಾಣಿ ವೆಬ್ ಡೆಸ್ಕ್ Updated:

ಅಕ್ಷರ ಗಾತ್ರ : | |

ನವದೆಹಲಿ: ದೇಶದ ಮೂರನೇ ಅತಿದೊಡ್ಡ ನಾಗರಿಕ ಪ್ರಶಸ್ತಿ ಪದ್ಮಭೂಷಣ ಸ್ವೀಕರಿಸಿದ ಬ್ಯಾಡ್ಮಿಂಟನ್ ಆಟಗಾರ್ತಿ ಪಿ.ವಿ. ಸಿಂಧು ಅದಕ್ಕೂ ಮುನ್ನ ಇನ್‌ಸ್ಟಾಗ್ರಾಮ್‌ನಲ್ಲಿ ತಮ್ಮ ದೀಪಾವಳಿ ಆಚರಣೆಯ ವಿಡಿಯೊಯೊಗಳನ್ನು ಹಂಚಿಕೊಂಡಿದ್ದರು. ಅದರಲ್ಲಿ ಹಾಡೊಂದಕ್ಕೆ 26 ವರ್ಷದ ಆಟಗಾರ್ತಿ ಹೆಜ್ಜೆ ಹಾಕಿದ್ದು, ಜಾಲತಾಣದಲ್ಲಿ ವೈರಲ್ ಆಗಿದೆ.

ಕಾಂಜಿವರಂ ಲೆಹೆಂಗಾ ಉಡುಪನ್ನು ಧರಿಸಿರುವ ಸಿಂಧು ಪ್ರಸಿದ್ಧ ಲವ್ ವಾಂಟಿಟಿ ಹಾಡಿಗೆ ಸಂತಸದಿಂದ ನೃತ್ಯ ಮಾಡಿದ್ಧಾರೆ.

ದೀಪಾವಳಿ ಸಂಭ್ರಮಾಚರಣೆಯ ಸರಣಿ ಪೋಸ್ಟ್‌ಗಳಲ್ಲಿ ನೃತ್ಯದ ತುಣುಕನ್ನೂ ಅವರು ಹಂಚಿಕೊಂಡಿದ್ದಾರೆ. ಭಾನುವಾರ ಪೋಸ್ಟ್ ಮಾಡಲಾದ ವಿಡಿಯೊಗೆ ಒಂದು ದಿನದ ಅಂತರದಲ್ಲಿ 12 ಲಕ್ಷಕ್ಕೂ ಅಧಿಕ ವೀವ್ಸ್ ಬಂದಿದೆ.

ಸಾಂಪ್ರದಾಯಿಕ ನೃತ್ಯ, ಲವ್ ಮ್ಯೂಸಿಕ್ ಮುಂತಾದ ಹ್ಯಾಶ್ ಟ್ಯಾಗ್ ಕೊಟ್ಟಿರುವ ಸಿಂಧು, ದೀಪಗಳ ಎಮೋಜಿಗಳನ್ನು ಹಾಕಿದ್ದಾರೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು