ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾಕಿ ಕ್ರೀಡಾಂಗಣಕ್ಕೆ ರಾಣಿ ರಾಂಪಾಲ್‌ ಹೆಸರು

Last Updated 21 ಮಾರ್ಚ್ 2023, 18:44 IST
ಅಕ್ಷರ ಗಾತ್ರ

ನವದೆಹಲಿ: ರಾಯ್‌ಬರೇಲಿಯಲ್ಲಿರುವ ಎಂಸಿಎಫ್ ಹಾಕಿ ಕ್ರೀಡಾಂಗಣಕ್ಕೆ ಮರುನಾಮಕರಣ ಮಾಡಲಾಗಿದ್ದು, ಭಾರತ ಮಹಿಳಾ ಹಾಕಿ ತಂಡದ ಆಟಗಾರ್ತಿ ರಾಣಿ ರಾಂಪಾಲ್‌ ಅವರ ಹೆಸರು ಇಡಲಾಗಿದೆ.

ಭಾರತದ ಕ್ರೀಡಾಂಗಣವೊಂದಕ್ಕೆ ಮಹಿಳಾ ಕ್ರೀಡಾಪಟುವಿನ ಹೆಸರು ಇಟ್ಟಿರುವುದು ಇದೇ ಮೊದಲು. ಎಂಸಿಎಫ್ ಕ್ರೀಡಾಂಗಣವನ್ನು ಇನ್ನು ಮುಂದೆ ‘ರಾಣೀಸ್ ಗರ್ಲ್ಸ್‌ ಹಾಕಿ ಟರ್ಫ್’ ಎಂದು ಕರೆಯಲಾಗುತ್ತದೆ.

ಕ್ರೀಡಾಂಗಣದ ಫೋಟೊವನ್ನು ತಮ್ಮ ಟ್ವಿಟರ್ ಖಾತೆಯಲ್ಲಿ ಪ್ರಕಟಿಸಿರುವ ರಾಣಿ, ’ಹಾಕಿ ಕ್ರೀಡೆಗೆ ನೀಡಿರುವ ಕೊಡುಗೆಯನ್ನು ಪರಿಗಣಿಸಿ ನನಗೆ ಈ ಗೌರವ ನೀಡಲಾಗಿದೆ’ ಎಂದು ಬರೆದುಕೊಂಡಿದ್ದಾರೆ.

‘ಇದು ಹೆಮ್ಮೆಯ ಮತ್ತು ಭಾವನಾತ್ಮಕ ಕ್ಷಣವಾಗಿದೆ. ಇಂತಹ ಗೌರವ ದೊರೆತ ಭಾರತದ ಮೊದಲ ಮಹಿಳಾ ಹಾಕಿ ಆಟಗಾರ್ತಿ ನಾನು. ಈ ಗೌರವವನ್ನು ಭಾರತ ಮಹಿಳಾ ಹಾಕಿ ತಂಡಕ್ಕೆ ಅರ್ಪಿಸುತ್ತೇನೆ. ಮುಂದಿನ ಪೀಳಿಗೆಯ ಆಟಗಾರ್ತಿಯರಿಗೆ ಇದು ಸ್ಫೂರ್ತಿಯಾಗಬಹುದು ಎಂಬ ವಿಶ್ವಾಸ ಹೊಂದಿದ್ದೇನೆ’ ಎಂದಿದ್ದಾರೆ.

ರಾಣಿ 250ಕ್ಕೂ ಅಧಿಕ ಅಂತರರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT