ಮಂಗಳವಾರ, ಸೆಪ್ಟೆಂಬರ್ 21, 2021
21 °C

ಕೇರಳದಲ್ಲಿ ಅಂಜು ಬಾಬಿ ಜಾರ್ಜ್‌ ಮಾರ್ಗ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಕೋಟ್ಟಯಂ (ಕೇರಳ): ಒಲಿಂಪಿಯನ್ ಅಥ್ಲೀಟ್ ಅಂಜು ಬಾಬಿ ಜಾರ್ಜ್ ಮತ್ತು ಖ್ಯಾತ ವಾಲಿಬಾಲ್ ಆಟಗಾರ ಪಿ. ಭರತನ್ ನಾಯರ್ ಅವರ ಹೆಸರುಗಳನ್ನು ರಸ್ತೆಗಳಿಗೆ ಇಡಲಾಗಿದೆ.

‘ಇಬ್ಬರೂ ನಮ್ಮ ನಗರದ ಹೆಮ್ಮೆಯ ಕ್ರೀಡಾಪಟುಗಳು. ಅವರ ಸಾಧನೆಗಳನ್ನು ಗೌರವಿಸುವುದು ನಮ್ಮ ಕರ್ತವ್ಯ. ಬಹಳ ಕಾಲದ ಹಿಂದೆಯೇ ಈ ಕಾರ್ಯ ನಡೆಯಬೇಕಿತ್ತು. ಆದರೆ, ಈಗಲಾದರೂ ಮಾಡುವುದು ನಮ್ಮ ಜವಾಬ್ದಾರಿ’ ಎಂದು ಚಙನಶೇರಿ ಮುನ್ಸಿಪಲ್ ಮುಖ್ಯಸ್ಥ ಸಾಜನ್ ಫ್ರಾನ್ಸಿಸ್ ಹೇಳಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿರುವ ಅಂಜು, ‘ಇದೊಂದು ಅನಿರೀಕ್ಷಿತವಾಗಿ ಒಲಿದುಬಂದ ಗೌರವವಾಗಿದೆ. ನನ್ನ ತವರೂರಿನ ಜನರು ಗೌರವಿಸುತ್ತಿರುವುದು ಅತೀವ ಸಂತಸ ತಂದಿದೆ’ ಎಂದಿದ್ದಾರೆ.

1963ರಲ್ಲಿ ದೆಹಲಿಯಲ್ಲಿ ನಡೆದಿದ್ದ ಒಲಿಂಪಿಕ್ ಪೂರ್ವ ಕ್ವಾಲಿಫೈಯರ್ ಟೂರ್ನಿಯಲ್ಲಿ ಭರತನ್ ನಾಯರ್ ಭಾರತ ತಂಡವನ್ನು ಪ್ರತಿನಿಧಿಸಿದ್ದರು. ಚಙನಶೇರಿಯ ಪುಳವತುವಿನ ಅವರು 1956ರರಲ್ಲಿ ಪ್ಯಾರಿಸ್‌ನಲ್ಲಿ ನಡೆದಿದ್ದ ವಿಶ್ವ ವಾಲಿಬಾಲ್ ಚಾಂಪಿಯನ್‌ಷಿಪ್‌ನಲ್ಲಿಯೂ ಆಡಿದ್ದರು. ಅವರು 2007ರಲ್ಲಿ ನಿಧನರಾಗಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು