ಶನಿವಾರ, ಫೆಬ್ರವರಿ 27, 2021
20 °C

ಬ್ಯಾಡ್ಮಿಂಟನ್‌: ಫೈನಲ್‌ಗೆ ಸಮೀರ್‌ ವರ್ಮಾ

ಪಿಟಿಐ Updated:

ಅಕ್ಷರ ಗಾತ್ರ : | |

Deccan Herald

ಹೈದರಾಬಾದ್‌: ಭಾರತದ ಅಗ್ರಶ್ರೇಯಾಂಕಿತ ಸಮೀರ್‌ ವರ್ಮಾ ಅವರು ಹೈದರಾಬಾದ್‌ ಓಪನ್‌ ಬ್ಯಾಡ್ಮಿಂಟನ್‌ ಟೂರ್ನಿಯಲ್ಲಿ ಫೈನಲ್‌ ಪ್ರವೇಶಿಸಿದ್ದಾರೆ.

ಶನಿವಾರ ನಡೆದ ಪುರುಷರ ಸಿಂಗಲ್ಸ್‌ ವಿಭಾಗದ ಸೆಮಿಫೈನಲ್‌ ಪಂದ್ಯದಲ್ಲಿ ಸಮೀರ್‌, 16–21, 21–15, 21–11ರಿಂದ ಆರ್‌ಎಂವಿ ಗುರುಸಾಯಿದತ್ತ ಅವರನ್ನು ಮಣಿಸಿದರು. ಈ ಹಣಾಹಣಿಯು 51 ನಿಮಿಷಗಳ ಕಾಲ ನಡೆಯಿತು. 

ನಾಲ್ಕರ ಘಟ್ಟದ ಇನ್ನೊಂದು ಪಂದ್ಯದಲ್ಲಿ ಮಲೇಷ್ಯಾದ ಸೂಂಗ್‌ ಜೂ ವೆನ್‌ ಅವರು 21–17, 21–14ರಿಂದ ಇಂಡೊನೇಷ್ಯಾದ ಫರ್ಮಾನ್‌ ಅಬ್ದುಲ್‌ ಖೊಲಿಕ್‌ ಅವರ ವಿರುದ್ಧ ಗೆದ್ದರು. ಫೈನಲ್‌ ಹಣಾಹಣಿಯಲ್ಲಿ ಸಮೀರ್‌ ಹಾಗೂ ಸೂಂಗ್‌ ಜೂ ಅವರು ಮುಖಾಮುಖಿಯಾಗಲಿದ್ದಾರೆ. 

ಪುರುಷರ ಡಬಲ್ಸ್‌ ವಿಭಾಗದಲ್ಲಿ ಸಾತ್ವಿಕ್‌ಸಾಯಿರಾಜ್‌ ರಣಕಿರೆಡ್ಡಿ ಹಾಗೂ ಚಿರಾಗ್‌ ಶೆಟ್ಟಿ ಜೋಡಿಯು ಫೈನಲ್‌ ಪ್ರವೇಶಿಸಿತು. 

ಸೆಮಿಫೈನಲ್‌ ಪಂದ್ಯದಲ್ಲಿ ಈ ಜೋಡಿಯು 21–14, 21–6ರಿಂದ ಭಾರತದವರೇ ಆದ ಅರುಣ್‌ ಜಾರ್ಜ್‌ ಹಾಗೂ ಸನ್ಯಾಮ್‌ ಶುಕ್ಲಾ ಜೋಡಿಯನ್ನು ಪರಾಭವಗೊಳಿಸಿತು. 

ಮಿಶ್ರ ವಿಭಾಗದ ಸೆಮಿಫೈನಲ್‌ ಪಂದ್ಯದಲ್ಲಿ ಪ್ರಣವ್‌ ಜೆರ್ರಿ ಚೋಪ್ರಾ ಹಾಗೂ ಎನ್‌. ಸಿಕ್ಕಿ ರೆಡ್ಡಿ ಜೋಡಿಯು 21–19, 21–15ರಿಂದ ಹಾಂಕಾಂಗ್‌ನ ಚಾಂಗ್‌ ತಕ್‌ ಚಿಂಗ್‌ ಹಾಗೂ ಎನ್‌ಜಿ ವಿಂಗ್‌ ಯಂಗ್‌ ಜೋಡಿಯನ್ನು ಸೋಲಿಸಿತು. 

ಫೈನಲ್‌ ಪಂದ್ಯದಲ್ಲಿ ಈ ಜೋಡಿಯು ಇಂಡೊನೇಷ್ಯಾದ ಅಕ್ಬರ್‌ ಬಿಂತಾಂಗ್‌ ಕಹ್ಯೊನೊ ಹಾಗೂ ವಿನ್ನಿ ಒಕ್ತಾವಿನಾ ಕಂಡೋವ್‌ ಜೋಡಿಯೊಂದಿಗೆ ಸೆಣಸಲಿದೆ. 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.