ಸೋಮವಾರ, ಡಿಸೆಂಬರ್ 6, 2021
24 °C

ವಿಶ್ವ ಟೇಬಲ್ ಟೆನಿಸ್ ಚಾಂಪಿಯನ್‌ಷಿಪ್: ಮೂರನೇ ಸುತ್ತಿಗೆ ಭಾರತದ ಸತ್ಯನ್

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಹ್ಯೂಸ್ಟನ್: ಭಾರತದ ಸತ್ಯನ್ ಜ್ಞಾನಶೇಖರನ್ ಇಲ್ಲಿ ನಡೆಯುತ್ತಿರುವ ವಿಶ್ವ ಟೇಬಲ್ ಟೆನಿಸ್ ಚಾಂಪಿಯನ್‌ಷಿಪ್‌ನ ಪುರುಷರ ಸಿಂಗಲ್ಸ್‌ ವಿಭಾಗದಲ್ಲಿ ಮೂರನೇ ಸುತ್ತಿಗೆ ಪ್ರವೇಶಿಸಿದರು.

ಗುರುವಾರ ನಡೆದ ಎರಡನೇ ಸುತ್ತಿನ ಪಂದ್ಯದಲ್ಲಿ ಸತ್ಯನ್ 11-9, 11-9, 11-8, 11-6 ರಿಂದ ರಷ್ಯಾದ ವ್ಲಾಡಿಮಿರ್ ಸಿಡೊರೆಂಕೊ ವಿರುದ್ಧ ಗೆಲುವು ಸಾಧಿಸಿದರು.

32ರ ಘಟ್ಟದಲ್ಲಿ ಅವರು ವಿಶ್ವ ಶ್ರೇಯಾಂಕದಲ್ಲಿ 17ನೇ ಸ್ಥಾನದಲ್ಲಿರುವ ನೈಜಿರಿಯಾದ ಅರುನಾ ಖಾದ್ರಿಯನ್ನು ಎದುರಿಸಲಿದ್ದಾರೆ.

ಅರ್ಚನಾ–ಶರತ್ ಮುನ್ನಡೆ: ಅಗ್ರಶ್ರೇಯಾಂಕದ ಆಟಗಾರ ಶರತ್ ಕಮಲ್ ಮತ್ತು ಕರ್ನಾಟಕದ ಅರ್ಚನಾ ಕಾಮತ್ ಜೋಡಿಯು ಮಿಶ್ರ ಡಬಲ್ಸ್‌ನಲ್ಲಿ 32ರ ಹಂತಕ್ಕೆ ಪ್ರವೇಶಿಸಿದರು.

ಭಾರತದ ಜೋಡಿಯು 3–0ಯಿಂದ ಅಲ್ಗೇರಿಯಾದ ಸಮಿ ಕೆರಾಫ್ ಮತ್ತು ಕಾತಿಯಾ ಕೆಸಾಸಿ ವಿರುದ್ಧ ಗೆದ್ದು 32ರ ಹಂತಕ್ಕೆ ಪ್ರವೇಶಿಸಿದರು.

ಸತ್ಯನ್ ಮತ್ತು ಮಣಿಕಾ ಬಾತ್ರಾ ಜೋಡಿಯು ಮೊದಲ ಸುತ್ತಿನಲ್ಲಿ ಬೈ ಪಡೆದು 32ರ ಘಟ್ಟಕ್ಕೆ ತಲುಪಿದರು. ಈ ಹಂತದಲ್ಲಿ ಅವರು ಪೆರ್ಟೊ ರಿಕೊ ಆಡ್ರಿಯಾನಾ ದಿಯಾಜ್ ಮತ್ತು ಬ್ರಯನ್ ಅಫ್ಯಾಂಡರ್ ವಿರುದ್ಧ ಆಡುವರು.

ಮಹಿಳೆಯರ ಡಬಲ್ಸ್‌ನಲ್ಲಿ ಮಣಿಕಾ ಬಾತ್ರ ಮತ್ತು ಅರ್ಚನಾ ಕಾಮತ್ ಕೂಡ ಮೊದಲ ಸುತ್ತಿನಲ್ಲಿ ಬೈ ಪಡೆದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು