ಗುರುವಾರ , ಏಪ್ರಿಲ್ 9, 2020
19 °C

ಕ್ಯಾಂಡಿಡೇಟ್ಸ್‌ ಚೆಸ್‌; ಹಸ್ತಲಾಘವ ಆಟಗಾರರ ವಿವೇಚನೆಗೆ

ರಾಯಿಟರ್ಸ್‌ Updated:

ಅಕ್ಷರ ಗಾತ್ರ : | |

Prajavani

ಮಾಸ್ಕೊ: ವಿಶ್ವದ ಎಂಟು ಮಂದಿ ಶ್ರೇಷ್ಠ ಆಟಗಾರರು ರಷ್ಯಾದ ಯಕತಾರಿನ್‌ಬರ್ಗ್‌ನಲ್ಲಿ ಮಂಗಳವಾರ ಆರಂಭವಾದ ಕ್ಯಾಂಡಿಡೇಟ್ಸ್‌ ಚೆಸ್‌ ಟೂರ್ನಿಯಲ್ಲಿ ಭಾಗವಹಿಸುತ್ತಿದ್ದಾರೆ. ಆದರೆ ಆಟಗಾರರು ‘ಹಸ್ತಲಾಘವ’ ನೀಡುವುದು ಆಯ್ಕೆಗೆ ಬಿಟ್ಟಿದ್ದು ಎಂದು ಸಂಘಟಕರು ಸ್ಪಷ್ಟಪಡಿಸಿದ್ದಾರೆ.

ಕೊರೊನಾ ವೈರಸ್‌ ಭೀತಿಯಿಂದಾಗಿ ವಿಶ್ವದ ಬಹುತೇಕ ಕ್ರೀಡೆಗಳು ಸ್ಥಗಿತಗೊಂಡಿರುವ ಹಂತದಲ್ಲೇ, ಹಸ್ತಲಾಘವ ವಿಷಯಕ್ಕೆ ಸಂಬಂಧಿಸಿ ಈ ನಿರ್ಧಾರಕ್ಕೆ ಬರಲಾಗಿದೆ. ಸಾಮಾನ್ಯವಾಗಿ ಆಟಕ್ಕೆ ಮೊದಲು ಮತ್ತು ನಂತರ ಆಟಗಾರರು ಕೈಕುಲುಕುವುದು ಚೆಸ್‌ನಲ್ಲಿ ಸಾಮಾನ್ಯ. 

ವಿಶ್ವ ಚಾಂಪಿಯನ್‌, ನಾರ್ವೆಯ ಆಟಗಾರ ಮ್ಯಾಗ್ನಸ್‌ ಕಾರ್ಲ್‌ಸನ್‌ ಅವರಿಗೆ ಸವಾಲಿಗನನ್ನು ಆಯ್ಕೆ ಮಾಡಲು ಈ ಟೂರ್ನಿ ನಡೆಯುತ್ತಿದೆ. ಈ ಟೂರ್ನಿ ಏಪ್ರಿಲ್‌ 3ರವರೆಗೆ ನಡೆಯಲಿದೆ. ಯಕತಾರಿನ್‌ಬರ್ಗ್‌, ರಾಜಧಾನಿ ಮಾಸ್ಕೊದಿಂದ 1,400 ಕಿ.ಮೀ. ಪೂರ್ವದಲ್ಲಿದೆ. ಆಟಗಾರರಿಗೆ ಯಾವುದೇ ಆರೋಗ್ಯ ಸಮಸ್ಯೆಯಾಗದಂತೆ ಮುನ್ನೆಚ್ಚರಿಕೆ ವಹಿಸಲಾಗಿದೆ.

ಚೆಸ್‌ ಬೋರ್ಡ್ ಪಕ್ಕ ಸ್ಯಾನಿಟೈಜರ್‌ಗಳ ಸಣ್ಣ ಶೀಶೆಗಳನ್ನು ಇಡಲಾಗಿದೆ.

ರಷ್ಯದಲ್ಲಿ ಕೊರೊನಾ ಸೋಂಕಿನ 114 ಪ್ರಕರಣಗಳು ವರದಿಯಾಗಿವೆ. ಸೋಂಕು ಹಬ್ಬುವುದನ್ನು ತಡೆಯಲು ಮೇ ತಿಂಗಳವರೆಗೆ ವಿದೇಶಿಯರಿಗೆ ಪ್ರವೇಶ ನಿರಾಕರಿಸಲಾಗಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು