ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚೆಸ್‌: ಶರಣ್ ರಾವ್ ಚಾಂಪಿಯನ್‌

ಓಜಸ್, ಪ್ರಚುರ, ಪಾರ್ಥಸಾರಥಿ ಕೂಡ ರಾಷ್ಟ್ರೀಯ ಚಾಂಪಿಯನ್‌ಷಿಪ್‌ಗೆ ಆಯ್ಕೆ
Last Updated 4 ಏಪ್ರಿಲ್ 2021, 16:08 IST
ಅಕ್ಷರ ಗಾತ್ರ

ಬೆಂಗಳೂರು: ಅಂತಿಮ ಸುತ್ತುಗಳಲ್ಲಿ ಅಮೋಘ ಸಾಮರ್ಥ್ಯ ತೋರಿದ ಮಂಗಳೂರಿನ ಶರಣ್ ರಾವ್ ಅವರು ಬೆಂಗಳೂರು ಗ್ರಾಮಾಂತರ ಜಿಲ್ಲಾ ಚೆಸ್ ಸಂಸ್ಥೆ ಆಯೋಜಿಸಿದ್ದ ರಾಜ್ಯ ಮುಕ್ತ ಚೆಸ್ ಚಾಂಪಿಯನ್‌ಷಿಪ್‌ನ ಚಾಂಪಿಯನ್ ಪಟ್ಟ ಮುಡಿಗೇರಿಸಿಕೊಂಡರು.

1992 ಇಲೊ ರೇಟಿಂಗ್ ಹೊಂದಿರುವ ಶರಣ್, ವೈಟ್‌ಫೀಲ್ಡ್‌ನ ವರ್ಜೀನಿಯಾ ಮಾಲ್‌ನಲ್ಲಿ ಭಾನುವಾರ ಕೊನೆಗೊಂಡ ಚಾಂಪಿಯನ್‌ಷಿಪ್‌ನಲ್ಲಿ ಒಟ್ಟು ಎಂಟು ಪಾಯಿಂಟ್‌ಗಳೊಂದಿಗೆ ಪ್ರಶಸ್ತಿ ತಮ್ಮದಾಗಿಸಿಕೊಂಡರು. ಬೆಂಗಳೂರಿನವರಾದ ಓಜಸ್ ಕುಲಕರ್ಣಿ (2213 ಇಲೊ ರೇಟಿಂಗ್‌), ಪ್ರಚುರ (2126) ಮತ್ತು ಪಾರ್ಥಸಾರಥಿ (1992) ತಲಾ ಏಳೂವರೆ ಪಾಯಿಂಟ್‌ಗಳೊಂದಿಗೆ ಕ್ರಮವಾಗಿ ಎರಡು, ಮೂರು ಮತ್ತು ನಾಲ್ಕನೇ ಸ್ಥಾನ ಗಳಿಸಿದರು.

ಅಗ್ರ ನಾಲ್ಕು ಸ್ಥಾನಗಳನ್ನು ಗಳಿಸಿದವರು ಉತ್ತರಪ್ರದೇಶದ ಕಾನ್ಪುರದಲ್ಲಿ ನಡೆಯಲಿರುವ ರಾಷ್ಟ್ರೀಯ ಚೆಸ್ ಚಾಂಪಿಯನ್‌ಷಿಪ್‌ನಲ್ಲಿ ಆಡಲು ಅರ್ಹತೆ ಗಳಿಸಿದ್ದಾರೆ.

ಸಂಜೆ ನಡೆದ ಸಮಾರಂಭದಲ್ಲಿ ಯುನೈಟೆಡ್ ಕರ್ನಾಟಕ ಚೆಸ್ ಸಂಸ್ಥೆಯ ಕಾರ್ಯದರ್ಶಿ ಹನುಮಂತ ಆರ್ ಪ್ರಶಸ್ತಿ ವಿತರಿಸಿದರು. ಉಪಾಧ್ಯಕ್ಷ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲಾ ಚೆಸ್ ಸಂಸ್ಥೆಯ ಕಾರ್ಯದರ್ಶಿ ಚಿದಾನಂದ ಎ, ಮುಖ್ಯ ಆರ್ಬಿಟರ್ ಮುರುಘಸುಂದರಂ ಇದ್ದರು.

ಏಳಕ್ಕೂ ಹೆಚ್ಚು ಪಾಯಿಂಟ್ ಗಳಿಸಿದವರು: ಶರಣ್ ರಾವ್ (ಮಂಗಳೂರು–8 ಪಾಯಿಂಟ್ಸ್‌), ಓಜಸ್ ಕುಲಕರ್ಣಿ (ಬೆಂಗಳೂರು–7.5), ಪ್ರಚುರ (ಬೆಂಗಳೂರು–7.5), ಪಾರ್ಥಸಾರಥಿ (ಬೆಂಗಳೂರು–7.5), ಸುದರ್ಶನ್ ಭಟ್‌ (ಬೆಂಗಳೂರು–7), ಬಾಲಕಿಶನ್‌ ಎ (ಬೆಂಗಳೂರು–7), ರಕ್ಷಿತ್ ಶ್ರೀನಿವಾಸನ್ (ಬೆಂಗಳೂರು–7), ದ್ರಿಕ್ಷು ವಸಂತ್ (ಮಂಗಳೂರು–7), ಅರವಿಂದ ರಾಮನಾಥ ಅಯ್ಯರ್ (ಬೆಂಗಳೂರು–7), ಅದ್ವೈತ್ ರತ್ನಾಕರ್‌ (ಬೆಂಗಳೂರು–7), ನಾರಾಯಣ ಅಯ್ಯಂಗಾರ್ (ಬೆಂಗಳೂರು–7).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT