ಬುಧವಾರ, ಜೂನ್ 29, 2022
24 °C

ಡಬ್ಲ್ಯುಟಿಟಿ ಕಂಟೆಂಡರ್: ಸೆಮಿಗೆ ಶರತ್ ಕಮಲ್

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ದೋಹಾ: ಭಾರತದ ಅನುಭವಿ ಆಟಗಾರ ಶರತ್ ಕಮಲ್ ಇಲ್ಲಿ ನಡೆಯುತ್ತಿರುವ ಡಬ್ಲ್ಯುಟಿಟಿ ಕಂಟೆಂಡರ್ ಟೇಬಲ್ ಟೆನಿಸ್ ಚಾಂಪಿಯನ್‌ಷಿಪ್‌ನಲ್ಲಿ ಸೆಮಿಫೈನಲ್ ಪ್ರವೇಶಿಸಿದ್ದಾರೆ. 

ಬುಧವಾರ ನಡೆದ ಪುರುಷರ ಸಿಂಗಲ್ಸ್‌ ಪಂದ್ಯದಲ್ಲಿ ಶರತ್ 11–8, 11–7, 11–4ರಿಂದ ಕ್ರೊವೆಷ್ಯಾದ ಟಾಮಿಸ್ಲಾವ್ ಪುಚಾರ್ ವಿರುದ್ಧ ಗೆದ್ದರು. 

ಮೊದಲ ಸುತ್ತಿನಲ್ಲಿ ಜಿ. ಸತ್ಯನ್ ಸೋಲನುಭವಿಸಿದ್ದಾರೆ. ಇದರಿಂದಾಗಿ ಸಿಂಗಲ್ಸ್‌ನಲ್ಲಿ ಶರತ್ ಒಬ್ಬರೇ ಈಗ ಭಾರತದ ಪದಕ ಜಯದ ಭರವಸೆಯನ್ನು ಜೀವಂತವಾಗಿಟ್ಟಿದ್ದಾರೆ. ನಾಲ್ಕರ ಘಟ್ಟದಲ್ಲಿ ಶರತ್ ಅವರು ಚೀನಾದ ಯುವಾನ್ ಲೈಸೆನ್ ಅವರನ್ನು ಎದುರಿಸುವರು. 

ಈ ವಿಭಾಗದಲ್ಲಿ ಭಾರತದ ಮಾನವ್ ಠಕ್ಕರ್, ಹರ್ಮೀತ್ ದೇಸಾಯಿ, ಎಸ್‌ಎಫ್‌ಆರ್ ಸ್ನೇಹಿತ್ ಮತ್ತು ಮುದಿತ್ ದಾನಿ ನಿರಾಶೆ ಅನುಭವಿಸಿದರು.

ಮಿಶ್ರ ಡಬಲ್ಸ್‌ನಲ್ಲಿ ಸತ್ಯನ್ ಮತ್ತು ಮಣಿಕಾ ಬಾತ್ರಾ ಜೋಡಿಯು ಫೈನಲ್ ತಲುಪಿದೆ. ಏಳನೇ ಶ್ರೇಯಾಂಕದ ಭಾರತದ ಜೋಡಿಯು 3–2ರಿಂದ ಹಾಂಕಾಂಗ್‌ನ ವಾಂಗ್ ಚುನ್ ಟಿಂಗ್ ಮತ್ತು ಡೂ ಹೊಯ್ ಕೆನ್ ವಿರುದ್ಧ ಗೆದ್ದಿತು. 

ಮಹಿಳೆಯರ ಸಿಂಗಲ್ಸ್‌ನ ಮೊದಲ ಸುತ್ತಿನಲ್ಲಿ ಮಣಿಕಾ ಬಾತ್ರಾ 7–11, 5–11, 6–11ರಿಂದ ಚೀನಾ ಫ್ಯಾನ್ ಸಿಕಿ ವಿರುದ್ಧ ಸೋತರು. 

 ಅರ್ಚನಾ ಕಾಮತ್ ಮತ್ತು ಸುತೀರ್ಥ ಮುಖರ್ಜಿ ಅವರನ್ನು ಹೊರತುಪಡಿಸಿದರೆ, ಶ್ರೀಜಾ ಅಕುಲಾ, ಕೃತ್ವಿಕಾ ಸಿನ್ಹಾ ರಾಯ್ ಮತ್ತು ಪ್ರಾಪ್ತಿ ಸೇನ್ ಅವರು ಮೊದಲ ಸುತ್ತಿನಲ್ಲಿಯೇ ನಿರ್ಗಮಿಸಿದರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು