ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟಿಟಿ ಸಿಂಗಲ್ಸ್: ಸೆಮಿಗೆ ಶರತ್, ಸತ್ಯನ್‌

Last Updated 7 ಆಗಸ್ಟ್ 2022, 8:36 IST
ಅಕ್ಷರ ಗಾತ್ರ

ಬರ್ಮಿಂಗ್‌ಹ್ಯಾಮ್‌: ಭಾರತದ ಟೇಬಲ್ ಟೆನಿಸ್‌ ಆಟಗಾರರಾದ ಅಚಂತ ಶರತ್ ಕಮಲ್ ಮತ್ತು ಜಿ.ಸತ್ಯನ್ ಅವರು ಪುರುಷರ ಸಿಂಗಲ್ಸ್ ವಿಭಾಗದಲ್ಲಿ ನಾಲ್ಕರ ಘಟ್ಟ ತಲುಪಿದರು.

ಶನಿವಾರ ನಡೆದ ಕ್ವಾರ್ಟರ್‌ಫೈನಲ್ ಪಂದ್ಯಗಳಲ್ಲಿ ಶರತ್‌ 11-6, 11-7, 11-4, 11-7ರಿಂದ ಸಿಂಗಪುರದ ಇಸಾಕ್‌ ಕ್ವೆಕ್ ಎದುರು ಗೆದ್ದರೆ, ಸತ್ಯನ್‌11-5, 11-7, 11-5, 8-11, 10-12, 11-9ರಿಂದ ಇಂಗ್ಲೆಂಡ್‌ನ ಸ್ಯಾಮ್ ವಾಕರ್ ಎದುರು ಜಯ ಸಾಧಿಸಿದರು.

ಭಾರತದ ಇನ್ನೋರ್ವ ಸ್ಪರ್ಧಿ ಸನಿಲ್ ಶೆಟ್ಟಿ ಸವಾಲು ಅಂತ್ಯವಾಯಿತು. ಎಂಟರಘಟ್ಟದ ಪಂದ್ಯದಲ್ಲಿ ಅವರು11-9, 6-11, 8-11, 8-11, 4-11ರಿಂದ ಸ್ಥಳೀಯ ಆಟಗಾರ ಲಿಯಾಮ್ ಪಿಚ್‌ಫೋರ್ಡ್ ಎದುರು ಸೋತರು.

ಮಹಿಳಾ ಡಬಲ್ಸ್‌ನ ಪ್ರೀಕ್ವಾರ್ಟರ್‌ಫೈನಲ್‌ ಪಂದ್ಯಗಳಲ್ಲಿ ಶ್ರೀಜಾ ಅಕುಲ್‌– ರೀತ್ ಟೆನ್ನಿಸನ್‌11-7, 11-4, 11-3ರಿಂದ ವೇಲ್ಸ್‌ನ ಕ್ಲೊ ಅನ್ನಾ ಥಾಮಸ್‌ ವು ಜಾಂಗ್– ಲಾರಾ ವಿಟ್ಟನ್ ಎದುರು ಗೆದ್ದರೆ, ಮಣಿಕಾ ಬಾತ್ರಾ– ದಿಯಾ ಚಿತಳೆ11-5, 11-5, 11-3ರಿಂದ ಮಾರಿಷಸ್‌ನ ಜಲೀಮ್ ನಂದೇಶ್ವರಿ ಮತ್ತು ಔಮೆಹನಿ ಹೊಸೆನಲ್ಲಿ ಎದುರು ಜಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT