ಸಂಚಿಯೊನ್, ಕೊರಿಯಾ: ಲಕ್ಷ್ಯ ಸೇನ್ ಮತ್ತು ಪಿ.ವಿ.ಸಿಂಧು ಅವರು ಕೊರಿಯಾ ಓಪನ್ ಬ್ಯಾಡ್ಮಿಂಟನ್ ಟೂರ್ನಿಯಲ್ಗಿ ಭಾರತದ ಸವಾಲು ಮುನ್ನಡೆಸಲಿದ್ದಾರೆ.

ಜರ್ಮನ್ ಓಪನ್ ಹಾಗೂ ಆಲ್ ಇಂಗ್ಲೆಂಡ್ ಚಾಂಪಿಯನ್‌ಷಿಪ್‌ನಲ್ಲಿ ಫೈನಲ್ ತಲುಪಿದ್ದ ಲಕ್ಷ್ಯ ಅವರು ಸದ್ಯ ವೃತ್ತಿಜೀವನದ ಅತ್ಯುತ್ತಮ ಫಾರ್ಮ್‌ನಲ್ಲಿದ್ದಾರೆ. ಈ ಟೂರ್ನಿಯ ಪುರುಷರ ಸಿಂಗಲ್ಸ್ ವಿಭಾಗದ ಮೊದಲ ಸುತ್ತಿನಲ್ಲಿ ಅವರಿಗೆ ಚೀನಾದ ಲು ಗುವಾಂಗ್ ಜು ಸವಾಲು ಎದುರಾಗಿದೆ.

ಆದಾಗ್ಯೂ, ಪುರುಷರ ಸಿಂಗಲ್ಸ್ ಡ್ರಾದಲ್ಲಿ ಕಠಿಣ ಸ್ಪರ್ಧಿಗಳಾದ ಇಂಡೊನೇಷ್ಯಾದ ಆಂಥೋನಿ ಗಿಂಟಿಂಗ್ (ಅಗ್ರ ಶ್ರೇಯಾಂಕ) ಮತ್ತು ಜೊನಾಥನ್ ಕ್ರಿಸ್ಟಿ (ಮೂರನೇ ಶ್ರೇಯಾಂಕ), ವಿಶ್ವ ಚಾಂಪಿಯನ್ ಮತ್ತು ನಾಲ್ಕನೇ ಶ್ರೇಯಾಂಕದ ಲೋಹ್ ಕೀನ್ ಯೂ ಇರುವುದರಿಂದ ಸೇನ್ ಪ್ರಶಸ್ತಿ ಹಾದಿ ಹಾದಿ ಅಷ್ಟು ಸುಲಭವಿಲ್ಲ. ಎರಡನೇ ಶ್ರೇಯಾಂಕದ, ಮಲೇಷ್ಯಾದ ಲೀ ಝಿ ಜಿಯಾ ಮತ್ತು ಎಂಟನೇ ಶ್ರೇಯಾಂಕದ ಥಾಯ್ ಕುನ್ಲಾವುತ್ ವಿಟಿದ್ಸನ್ ಕೂಡ ತೀವ್ರ ಸ್ಪರ್ಧೆಯೊಡ್ಡುವ ನಿರೀಕ್ಷೆಯಿದೆ.

ಪಿ.ವಿ.ಸಿಂಧು ಅವರು ಈ ವರ್ಷ ಸಯ್ಯದ್ ಮೋದಿ ಅಂತರರಾಷ್ಟ್ರೀಯ ಟೂರ್ನಿ ಮತ್ತು ಸ್ವಿಸ್ ಓಪನ್ ಟೂರ್ನಿಯಲ್ಲಿ ಪ್ರಶಸ್ತಿ ಜಯಿಸಿದ್ದಾರೆ. ಇಲ್ಲಿಯೂ ಉತ್ತಮ ಲಯ ಮುಂದುವರಿಸುವ ಛಲದಲ್ಲಿದ್ದು, ಮಹಿಳಾ ಸಿಂಗಲ್ಸ್ ಮೊದಲ ಪಂದ್ಯದಲ್ಲಿ ಅಮೆರಿಕದ ಲಾರೆನ್ ಲ್ಯಾಮ್ ಎದುರು ಕಣಕ್ಕಿಳಿಯಲಿದ್ದಾರೆ.

ಲಂಡನ್ ಒಲಿಂಪಿಕ್ಸ್ ಕಂಚಿನ ಪದಕ ವಿಜೇತೆ ಸೈನಾ ನೆಹ್ವಾಲ್ ಕೂಡ ಟೂರ್ನಿಯಲ್ಲಿ ಆಡುತ್ತಿದ್ದು, ಅವರಿಗೆ ಜಪಾನ್‌ನ ಅಸುಕಾ ತಕಹಶಿ ಸವಾಲು ಎದುರಾಗಿದೆ.

ಪುರುಷರ ಸಿಂಗಲ್ಸ್‌ನಲ್ಲಿ ಎಚ್.ಎಸ್. ಪ್ರಣಯ್ ಮಲೇಷ್ಯಾದ ಚೀಮ್ ಜೂನ್ ವೇಯ್ ಎದುರು ಆಡಲಿದ್ದರೆ, ಕಿದಂಬಿ ಶ್ರೀಕಾಂತ್ ಕೂಡ ಅದೇ ದೇಶದ ಇನ್ನೋರ್ವ ಆಟಗಾರ ಲಿಯೆವ್ ಡರೆನ್ ಅವರನ್ನು ಮೊದಲ ಪಂದ್ಯದಲ್ಲಿ ಎದುರಿಸಲಿದ್ದಾರೆ. ಕಿರಣ್ ಜಾರ್ಜ್ ಕೊರಿಯಾದ ಲೀ ಡಾಂಗ್ ಅವರಿಗೆ ಮುಖಾಮುಖಿಯಾಗಲಿದ್ದಾರೆ.

ಮಹಿಳಾ ಸಿಂಗಲ್ಸ್‌ನಲ್ಲಿ ಮಾಳವಿಕಾ ಬನ್ಸೋದ್, ಶ್ರೀಕೃಷ್ಣಪ್ರಿಯಾ ಕುದರವಳ್ಳಿ, ಡಬಲ್ಸ್‌ನಲ್ಲಿ ಅಶ್ವಿನಿ ಪೊನ್ನಪ್ಪ– ಎನ್. ಸಿಕ್ಕಿ ರೆಡ್ಡಿ ಆಡಲಿದ್ದರೆ, ಪುರುಷರ ಡಬಲ್ಸ್‌ನಲ್ಲಿ ಸಾತ್ವಿಕ್‌ಸಾಯಿರಾಜ್ ರಣಕಿರೆಡ್ಡಿ– ಚಿರಾಗ್ ಶೆಟ್ಟಿ, ಎಂ.ಆರ್. ಅರ್ಜುನ್– ಧ್ರುವ ಕಪಿಲ, ಮಿಶ್ರ ಡಬಲ್ಸ್ ವಿಭಾಗದಲ್ಲಿ ಬಿ.ಸುಮೀತ್ ರೆಡ್ಡಿ– ಅಶ್ವಿನಿ ಅದೃಷ್ಟ ಪರೀಕ್ಷಿಸಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.