ಭಾನುವಾರ, ಏಪ್ರಿಲ್ 18, 2021
31 °C
ಇಂಡೊನೇಷ್ಯಾ ಓಪನ್ ಬ್ಯಾಡ್ಮಿಂಟನ್ ಟೂರ್ನಿ: ಒಕುಹರಗೆ ನಿರಾಸೆ

ಸೆಮಿಫೈನಲ್‌ಗೆ ಸಿಂಧು ಲಗ್ಗೆ

ಪಿಟಿಐ Updated:

ಅಕ್ಷರ ಗಾತ್ರ : | |

ಜಕಾರ್ತ: ಚುರುಕಿನ ಆಟದ ಮೂಲಕ ಜಪಾನ್‌ನ ನೊಜೊಮಿ ಒಕುಹರ ಅವರನ್ನು ಕಂಗೆಡಿಸಿದ ಭಾರತದ ಪಿ.ವಿ.ಸಿಂಧು ಇಲ್ಲಿ ನಡೆಯುತ್ತಿರುವ ಇಂಡೊನೇಷ್ಯಾ ಓಪನ್ ಬ್ಯಾಡ್ಮಿಂಟನ್ ಟೂರ್ನಿಯ ಸೆಮಿಫೈನಲ್ ಪ್ರವೇಶಿಸಿದರು.

ಶುಕ್ರವಾರ ಸಂಜೆ ನಡೆದ ಎಂಟರ ಘಟ್ಟದ ಪಂದ್ಯದಲ್ಲಿ ಸಿಂಧು 21–14, 21–7ರಲ್ಲಿ ಗೆದ್ದರು. ಐದನೇ ಶ್ರೇಯಾಂಕ ಹೊಂದಿರುವ ಭಾರತದ ಆಟಗಾರ್ತಿಗೆ ಮೂರನೇ ಶ್ರೇಯಾಂಕದ ಎದುರಾಳಿಯನ್ನು ಮಣಿಸಲು 44 ನಿಮಿಷಗಳು ಸಾಕಾದವು. ನಾಲ್ಕರ ಘಟ್ಟದ ಪಂದ್ಯದಲ್ಲಿ ಅವರು ಚೀನಾದ ಚೆನ್ ಯೂ ಫಿ ಎದುರು ಸೆಣಸುವರು.

ಆರಂಭದಲ್ಲಿ ಸ್ವಲ್ಪ ಎಡವಿದ ಸಿಂಧು ನಂತರ ಚೇತರಿಸಿಕೊಂಡರು. 6–6ರ ಸಮಬಲ ಸಾಧಿಸಿದ ಮೇಲೆ ಕೊನೆಯ ವರೆಗೂ ಆಧಿಪತ್ಯ ಸ್ಥಾಪಿಸಿದರು. ಮೊದಲ ಗೇಮ್‌ನ ವಿರಾಮದ ವೇಳೆ 11–8ರ ಮುನ್ನಡೆ ಸಾಧಿಸಿದ್ದ ಸಿಂಧು ನಂತರ ಸುಲಭವಾಗಿ ಗೇಮ್ ಗೆದ್ದರು. ಎರಡನೇ ಗೇಮ್‌ ಪೂರ್ತಿ ಏಕಪಕ್ಷೀಯವಾಗಿತ್ತು. ಅವರ ಚುರುಕಿನ ಆಟಕ್ಕೆ ಉತ್ತರಿಸಲಾಗದ ಒಕುಹರ ಸುಲಭವಾಗಿ ಸೋಲೊಪ್ಪಿಕೊಂಡರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.