ಗುರುವಾರ , ಫೆಬ್ರವರಿ 20, 2020
29 °C

ಅಮೆರಿಕಾ ಓಪನ್‌ ಬ್ಯಾಡ್ಮಿಂಟನ್‌: ಸೌರಭ್‌ ವರ್ಮಾ ಸೆಮಿಗೆ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಫುಲ್ಲರ್ಟನ್‌, ಅಮೆರಿಕ: ಭಾರತದ ಸೌರಭ್‌ ವರ್ಮಾ ಶುಕ್ರವಾರ ಅಮೆರಿಕ ಓಪನ್‌ ಬ್ಯಾಡ್ಮಿಂಟನ್‌ ಟೂರ್ನಿ ಯಲ್ಲಿ ಸೆಮಿಫೈನಲ್‌ಗೆ ಲಗ್ಗೆಯಿಟ್ಟರು.

ಪುರುಷರ ಸಿಂಗಲ್ಸ್‌ ವಿಭಾಗದ ಕ್ವಾರ್ಟರ್‌ ಫೈನಲ್‌ ಹಣಾಹಣಿಯಲ್ಲಿ ಸೌರಭ್‌ 21–19, 23–21 ನೇರ ಗೇಮ್‌ಗಳಿಂದ ಭಾರತದ ಮತ್ತೊಬ್ಬ ಆಟಗಾರ, ಟೂರ್ನಿಯಲ್ಲಿ ಎರಡನೇ ಶ್ರೇಯಾಂಕ ಹೊಂದಿದ್ದ ಎಚ್‌.ಎಸ್‌. ಪ್ರಣಯ್‌ಗೆ ಆಘಾತ ನೀಡಿದರು. ಈ ಹೋರಾಟವು ಕೇವಲ 50 ನಿಮಿಷಗಳಲ್ಲಿ ಮುಗಿಯಿತು. ಸೌರಭ್‌ ಅವರು ಎರಡು ಗೇಮ್‌ಗಳಲ್ಲೂ ಪ್ರಣಯ್‌ ಅವರಿಂದ ತೀವ್ರ ಪೈಪೋಟಿ ಎದುರಿಸಿದರು.

ವಿಶ್ವ ಕ್ರಮಾಂಕದಲ್ಲಿ 43ನೇ ಸ್ಥಾನದಲ್ಲಿರುವ ಸೌರಭ್‌ ಅವರು ನಾಲ್ಕರ ಘಟ್ಟದ ಪಂದ್ಯದಲ್ಲಿ ಥಾಯ್ಲೆಂಡ್‌ ಆಟಗಾರ ತನೊಂಗ್ಸಾಕ್‌ ಸಾನ್ಸೊಂಬುನ್ಸುಕ್‌ ಅವ ರನ್ನು ಎದುರಿಸುವರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು