ಬುಧವಾರ, ಫೆಬ್ರವರಿ 26, 2020
19 °C

ಸೌರವ್‌ ಕೊಠಾರಿ ರೆವೆಂಟನ್‌ ಮಾಸ್ಟರ್‌

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಮೆಲ್ಬರ್ನ್‌: ಭಾರತದ ಸೌರವ್‌ ಕೊಠಾರಿ ಅವರು ರೋಚಕ ಹಣಾಹಣಿಯಲ್ಲಿ ಆಸ್ಟ್ರೇಲಿಯಾದ ಜೊಲ್‌ ಯಂಗರ್‌ ಅವರನ್ನು ಮಣಿಸಿ ರೆವೆಂಟನ್‌ ಮಾಸ್ಟರ್ಸ್ ಸ್ನೂಕರ್‌ ಪ್ರಶಸ್ತಿಗೆ ಮುತ್ತಿಕ್ಕಿದ್ದಾರೆ.

11 ಫ್ರೇಮ್‌ಗಳ ಫೈನಲ್‌ ಪಂದ್ಯದಲ್ಲಿ 6–5ರಿಂದ ಸೌರವ್‌ ಜಯದ ನಗೆ ಬೀರಿದರು. ಇದರೊಂದಿಗೆ ಆಸ್ಟ್ರೇಲಿಯಾದ ಬಿಲಿಯರ್ಡ್ಸ್ ಮತ್ತು ಸ್ನೂಕರ್‌ ಸಮಿತಿಯ ಕ್ಯಾಲೆಂಡರ್‌ ವರ್ಷದಲ್ಲಿ ಪ್ರೀಮಿಯರ್‌ ಸ್ನೂಕರ್‌ ಟೂರ್ನಿಯಲ್ಲಿ ಪ್ರಶಸ್ತಿ ಗೆದ್ದ ಮೊದಲ ಭಾರತೀಯ ಆಟಗಾರ ಎನಿಸಿಕೊಂಡರು. ಆಸ್ಟ್ರೇಲಿಯಾದ ಅಗ್ರ 12 ಕ್ರಮಾಂಕದ ಆಟಗಾರರು ಮಾತ್ರ ಈ ಟೂರ್ನಿಗೆ ಆಹ್ವಾನಿತರಾಗಿದ್ದರು.

ಈ ವರ್ಷದ ಜೂನ್‌ನಲ್ಲಿ ರೆವೆಂಟನ್‌ ಕ್ಲಾಸಿಕ್‌ ಸ್ನೂಕರ್‌ ಟ್ರೋಫಿ ಜಯಿಸಿದ ಹಿನ್ನೆಲೆಯಲ್ಲಿ ಸೌರವ್‌ ಅವರಿಗೆ ವಿಶೇಷ ಆಹ್ವಾನವಿತ್ತು.

ಸೆಮಿಫೈನಲ್‌ ಪಂದ್ಯದಲ್ಲಿ ಸೌರವ್‌ ಅವರು ಜೊ ಮಿಂಚಿ ಎದುರು 5–1ರಿಂದ ಗೆದ್ದರೆ, ಯಂಗರ್‌ ಅವರು ಸ್ಟೀವ್‌ ಮಿಫ್‌ಸುದ್‌ ಅವರನ್ನು 5–2ರಿಂದ ಪರಾಭವಗೊಳಿಸಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)