7
ಉಭಯ ದೇಶಗಳ ನಡುವಣ ಸೌಹಾರ್ದ ಬ್ಯಾಸ್ಕೆಟ್‌ಬಾಲ್ ಇಂದಿನಿಂದ

ದಕ್ಷಿಣಕ್ಕೆ ಬಂದ ಉತ್ತರ ಕೊರಿಯಾ ತಂಡ

Published:
Updated:
ಮಂಗಳವಾರ ಪ್ಯೊಂಗ್ಯಾಂಗ್‌ಗೆ ಬಂದಿಳಿದ ದಕ್ಷಿಣ ಕೊರಿಯಾದ ಪುರುಷರ ಬಾಸ್ಕೆಟ್‌ಬಾಲ್‌ ತಂಡ    ರಾಯಿಟರ್ಸ್‌ ಚಿತ್ರ

ಪೆಂಗ್‌ಯಾಂಗ್: ಉತ್ತರ ಕೊರಿಯಾದ ಬ್ಯಾಸ್ಕೆಟ್‌ಬಾಲ್‌ ತಂಡಗಳೊಂದಿಗೆ  ಸೌಹಾರ್ದಯುತ ಪಂದ್ಯಗಳನ್ನು ಆಡಲು ದಕ್ಷಿಣ ಕೊರಿಯಾದ ಆಟಗಾರರು ಮಂಗಳವಾರ ಇಲ್ಲಿಗೆ ಬಂದಿಳಿದ್ದಾರೆ.

ದಕ್ಷಿಣ ಕೊರಿಯಾದ ಪುರುಷ ಹಾಗೂ ಮಹಿಳಾ ತಂಡಗಳು ಬುಧವಾರ ಹಾಗೂ ಗುರುವಾರ ಉತ್ತರ ಕೊರಿಯಾದೊಂದಿಗೆ ಒಟ್ಟು ನಾಲ್ಕು ಪಂದ್ಯಗಳನ್ನು ಆಡಲಿವೆ. ಉಭಯ ರಾಷ್ಟ್ರಗಳ ನಡುವೆ ರಾಜಕೀಯ ಬೆಸೆಯುವ ಸಲುವಾಗಿ ಈ ಪಂದ್ಯಗಳನ್ನು ಆಯೋಜಿಸಲಾಗಿದೆ.

ಬಾಸ್ಕೆಟ್‌ಬಾಲ್‌ ಆಟಗಾರರೊಂದಿಗೆ ಇಲ್ಲಿಗೆ ಬಂದಿಳಿದ ದಕ್ಷಿಣ ಕೊರಿಯಾದ ಸಚಿವ ಚೊ ಮ್ಯುಂಗ್‌ ಗ್ಯೋನ್‌, 20ಕ್ಕೂ ಹೆಚ್ಚು ಸರ್ಕಾರಿ ಉನ್ನತ ಅಧಿಕಾರಿಗಳು ಹಾಗೂ ಪತ್ರಕರ್ತರನ್ನು ಉತ್ತರ ಕೊರಿಯಾದ ಕ್ರೀಡಾ ಸಚಿವ ವಾನ್‌ ಕಿಲ್‌ ಯು ಅವರು ಸ್ವಾಗತಿಸಿದ್ದಾರೆ.

ಆಧ್ಯಕ್ಷ ಕಿಮ್‌ ಜಾಂಗ್‌ ಉನ್‌ ಅವರು ಈ ಪಂದ್ಯಗಳನ್ನು ವೀಕ್ಷಿಸುವ ಬಗ್ಗೆ ಸದ್ಯ ಯಾವುದೇ ರೀತಿಯ ಅಧಿಕೃತ ಮಾಹಿತಿ ಇಲ್ಲ.

ದಕ್ಷಿಣ ಕೊರಿಯಾದೊಂದಿಗಿನ ರಾಜತಾಂತ್ರಿಕ ಭಿನ್ನಾಭಿಪ್ರಾಯಗಳನ್ನು ತಗ್ಗಿಸುವ ಮೂಲಕ ದ್ವಿಪಕ್ಷೀಯ ಸಂಬಂಧವನ್ನು ಉತ್ತಮಗೊಳಿಸುವ ಸಲುವಾಗಿ ಉತ್ತರ ಕೊರಿಯಾವು ಅನೇಕ ನೂತನ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಅದರ ಭಾಗವಾಗಿಯೇ ಈ ಬಾಸ್ಕೆಟ್‌ಬಾಲ್‌ ಪಂದ್ಯಗಳು ನಡೆಯಲಿವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !