ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ರೀಡಾ ಪತ್ರಿಕೆಗೆ ಲೈಂಗಿಕ ಅಲ್ಪಸಂಖ್ಯಾತೆ ವ್ಯಾಲೆಂಟಿನಾ ಸಂಪಾಯೊ ಮಾಡೆಲ್

Last Updated 11 ಜುಲೈ 2020, 9:14 IST
ಅಕ್ಷರ ಗಾತ್ರ

ನ್ಯೂಯಾರ್ಕ್‌: ಮಾಡೆಲ್ ವೃತ್ತಿಯಲ್ಲಿ ತೊಡಗಿರುವ ಲೈಂಗಿಕ ಅಲ್ಪಸಂಖ್ಯಾತೆಯೊಬ್ಬರು ಕ್ರೀಡಾ ಪತ್ರಿಕೆ’ಸ್ಪೋರ್ಟ್ಸ್‌ ಇಲುಸ್ಟ್ರೇಟೆಡ್‌’ನ ಮುಖಪುಟದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಪತ್ರಿಕೆಯು ಈ ವರ್ಷ ಈಜುಡುಗೆಯ ಕುರಿತು ವಿಶೇಷ ಸಂಚಿಕೆಯನ್ನು ಹೊರತರಲಿದ್ದು ಅದಕ್ಕಾಗಿ ಈ ಯೋಜನೆಯನ್ನು ಹಾಕಿಕೊಂಡಿದೆ.

ಬ್ರೆಜಿಲ್‌ನ ವ್ಯಾಲೆಂಟಿನಾ ಸಂಪಾಯೊ ಅವರನ್ನು ಪತ್ರಿಕೆ ಆಯ್ಕೆ ಮಾಡಿಕೊಂಡಿದ್ದು ಮಾಡೆಲ್ ಕ್ಷೇತ್ರದಲ್ಲಿ ಹೆಸರು ಗಳಿಸಿರುವ ಹೇದಿ ಕ್ಲುಮ್ ಮತ್ತು ಆ್ಯಶ್ಲೆ ಗ್ರಹಾಂ ಅವರೂ ಈ ಸಂಚಿಕೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಸಂಚಿಕೆ ಇದೇ ತಿಂಗಳ 21ರಂದು ಮಾರುಕಟ್ಟೆಗೆ ಬಿಡುಗಡೆಯಾಗಲಿದೆ.

‘ಈ ವಿಷಯ ತಿಳಿದು ರೋಮಾಂಚನವಾಗಿದೆ. ಪತ್ರಿಕೆಯ ಈ ನಿರ್ಧಾರದಿಂದ ನಾನು ಪುಳಕಗೊಂಡಿದ್ದೇನೆ’ ಎಂದು 23 ವರ್ಷದ ಸಂಪಾಯೊ ಅಭಿಪ್ರಾಯಪಟ್ಟಿದ್ದಾರೆ.‘ವಿವಿಧ ದ್ವೀಪಗಳಲ್ಲಿ ಈಗಾಗಲೇ ಚಿತ್ರಗಳನ್ನು ಸೆರೆಹಿಡಿಯಲಾಗಿದೆ’ ಎಂದು ಪತ್ರಿಕೆಯ ಪ್ರಕಟಣೆ ತಿಳಿಸಿದೆ.

ಈಶಾನ್ಯ ಬ್ರೆಜಿಲ್‌ನ ಸೀರಾ ರಾಜ್ಯದ ಮೀನುಗಾರಿಕಾ ಪ್ರದೇಶದಿಂದ ಬಂದಿರುವ ಸಂಪಾಯೊ ತಮ್ಮ ದೇಶದಲ್ಲಿ ಲೈಂಗಿಕ ಅಲ್ಪಸಂಖ್ಯಾತರ ಮೇಲೆ ದಾಳಿ ನಡೆಯುತ್ತಿದ್ದು ಅವರು ಅವಮಾನಕ್ಕೂ ಒಳಗಾಗುತ್ತಿದ್ದಾರೆ ಎಂದು ಹೇಳುತ್ತಾರೆ.

ಸ್ಪೋರ್ಟ್ಸ್ ಇಲುಸ್ಟ್ರೇಟೆಡ್ ಪತ್ರಿಕೆಯು ಅನೇಕ ವರ್ಷಗಳಿಂದ ಯುವ ಮತ್ತು ಶ್ವೇತವರ್ಣದ ಮಾಡೆಲ್‌ಗಳನ್ನು ಬಳಸುತ್ತಿದ್ದು ಇದೇ ಮೊದಲ ಬಾರಿ ಲೈಂಗಿಕ ಅಲ್ಪಸಂಖ್ಯಾತ ವ್ಯಕ್ತಿಯ ಮೇಲೆ ಕಣ್ಣಿಟ್ಟಿದೆ. 1997ರಲ್ಲಿ ಟೈರಾ ಬ್ಯಾಂಕ್ಸ್ ಅವರನ್ನು ಮಾಡೆಲ್ ಆಗಿ ಬಳಸುವ ಮೂಲಕ ಮೊದಲ ಬಾರಿ ಕಪ್ಪುವರ್ಣದ ವ್ಯಕ್ತಿಗೆ ಅವಕಾಶ ನೀಡಿತ್ತು.

2017ರಲ್ಲಿ ಸಂಪಾಯೊ ಅವರ ಚಿತ್ರವನ್ನು ವೋಗ್ ಪತ್ರಿಕೆ ಮುಖಪುಟದಲ್ಲಿ ಪ್ರಕಟಿಸಿತ್ತು. ಆ ಮೂಲಕ ಲೈಂಗಿಕ ಅಲ್ಪಸಂಖ್ಯಾತ ಮಾಡೆಲ್‌ಗೆ ಈ ಗೌರವ ನೀಡಿದ ಮೊದಲ ಪತ್ರಿಕೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿತ್ತು. ಫ್ರಾನ್ಸ್‌ ಆವೃತ್ತಿಯಲ್ಲಿ ಆ ಚಿತ್ರ ಪ್ರಕಟಗೊಂಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT