ಬ್ಯಾಡ್ಮಿಂಟನ್‌: ಫೈನಲ್‌ಗೆ ತಾನ್ಯಾ, ಜನನಿ

7
ಪ್ರಶಸ್ತಿಗೆ ಪೃಥ್ವಿ–ಸನೀತ್ ಪೈಪೋಟಿ

ಬ್ಯಾಡ್ಮಿಂಟನ್‌: ಫೈನಲ್‌ಗೆ ತಾನ್ಯಾ, ಜನನಿ

Published:
Updated:
Deccan Herald

ಮೈಸೂರು: ಉತ್ತಮ ಆಟವಾಡಿದ ತಾನ್ಯಾ ಹೇಮಂತ್ ಮತ್ತು ಜನನಿ ಅನಂತಕುಮಾರ್ ಅವರು ಮೈಸೂರು ಜಿಲ್ಲಾ ಬ್ಯಾಡ್ಮಿಂಟನ್ ಸಂಸ್ಥೆ ಆಶ್ರಯದಲ್ಲಿ ನಡೆಯುತ್ತಿರುವ ರಾಜ್ಯ ರ‍್ಯಾಂಕಿಂಗ್ ಬ್ಯಾಡ್ಮಿಂಟನ್‌ ಟೂರ್ನಿಯ ಫೈನಲ್ ಪ್ರವೇಶಿಸಿದರು.

ಜಿ.ಎಸ್.ಸ್ಪೋರ್ಟ್ಸ್ ಕಾಂಪ್ಲೆಕ್ಸ್‌ನಲ್ಲಿ ಬುಧವಾರ ನಡೆದ ಬಾಲಕಿಯರ 17 ವರ್ಷ ವಯಸ್ಸಿನೊಳಗಿನವರ ವಿಭಾಗದ ಸೆಮಿಫೈನಲ್‌ನಲ್ಲಿ ಬೆಂಗಳೂರಿನ ಐ ಸ್ಪೋರ್ಟ್ಸ್‌ ಕ್ಲಬ್‌ನ ತಾನ್ಯಾ 17–21, 21–12, 21–8 ರಲ್ಲಿ ಕಾಸ್ಮೊಪಾಲಿಟನ್ ಕ್ಲಬ್‌ನ ವಿಜೇತಾ ಹರೀಶ್‌ ಅವರನ್ನು ಮಣಿಸಿದರು.

ಇನ್ನೊಂದು ಸೆಮಿಫೈನಲ್ ಪಂದ್ಯದಲ್ಲಿ ಐ ಸ್ಪೋರ್ಟ್ಸ್‌ ಕ್ಲಬ್‌ನ ಜನನಿ 21–11, 21–14 ರಲ್ಲಿ ಎಎಬಿಎಸ್‌ಎಯ ಅನನ್ಯಾ ಪ್ರವೀಣ್‌ ವಿರುದ್ಧ ಗೆದ್ದರು.

ಇದೇ ವಯೋವರ್ಗದ ಬಾಲಕರ ವಿಭಾಗದ ಫೈನಲ್‌ನಲ್ಲಿ ಶಿವಮೊಗ್ಗದ ಪೃಥ್ವಿ ರಾಯ್ ಹಾಗೂ ಬೆಂಗಳೂರಿನ ಲೆವೆಲ್‌ ಅಪ್ ಅಕಾಡೆಮಿಯ ಸನೀತ್ ಎಸ್. ದಯಾನಂದ್ ಪರಸ್ಪರ ಎದುರಾಗಲಿದ್ದಾರೆ.

ಸೆಮಿಫೈನಲ್ ಪಂದ್ಯದಲ್ಲಿ ಪೃಥ್ವಿ 12–21, 21–13, 21–16 ರಲ್ಲಿ ಲೆವೆಲ್‌ ಅಪ್‌ನ ನರೇನ್‌ ಅಯ್ಯರ್‌ ವಿರುದ್ಧ; ಸನೀತ್ 21–12, 21–18 ರಲ್ಲಿ ಐ ಸ್ಪೋರ್ಟ್ಸ್‌ನ ಸಾಕೇತ್‌ ವಿರುದ್ಧ ಜಯ ಪಡೆದರು.

ಬಾಲಕರ 15 ವರ್ಷ ವಯಸ್ಸಿನೊಳಗಿನವರ ವಿಭಾಗದ ಸೆಮಿಫೈನಲ್‌ ಪಂದ್ಯದಲ್ಲಿ ರಾಜನ್ಸ್‌ ಬ್ಯಾಡ್ಮಿಂಟನ್‌ ಅಕಾಡೆಮಿಯ ಸುಜ್ನಯನ್ ಉಲ್ಲಾಸ್‌ ಕಿಣಿ 21–13, 21–18 ರಲ್ಲಿ ದೊಮ್ಮಲೂರು ಕ್ಲಬ್‌ನ ಆದಿತ್ಯ ದಿವಾಕರ್‌ ವಿರುದ್ಧ; ಐ ಸ್ಪೋರ್ಟ್ಸ್‌ನ ಆಯುಷ್‌ ಆರ್‌.ಶೆಟ್ಟಿ 21–12, 21–13 ರಲ್ಲಿ ಧಾರವಾಡದ ವಿಷನ್‌ ಸ್ಪೋರ್ಟ್ಸ್‌ನ ತರುಣ್ ವಿರುದ್ಧ ಗೆದ್ದರು.

ಬಾಲಕಿಯರ ವಿಭಾಗದಲ್ಲಿ ವಿಜೇತಾ ಹರೀಶ್ 21–16, 18–21, 21–11 ರಲ್ಲಿ ಡಿವೈಇಎಸ್‌ನ ನೇಸಾ ಕಾರ್ಯಪ್ಪ ವಿರುದ್ಧ; ರೀತು ವರ್ಧನ್‌ ಶಾ 21–15, 21–11 ರಲ್ಲಿ ಗ್ಲೋರಿಯಾ ವಿನಯಕುಮಾರ್ ವಿರುದ್ಧ ಜಯ ಸಾಧಿಸಿದರು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !