ಹಾಕಿ: ಭಾರತ ತಂಡಕ್ಕೆ ಬೆಳ್ಳಿಯ ಪದಕ

7

ಹಾಕಿ: ಭಾರತ ತಂಡಕ್ಕೆ ಬೆಳ್ಳಿಯ ಪದಕ

Published:
Updated:
Deccan Herald

ಜೋಹರ್‌ ಬಹ್ರು, ಮಲೇಷ್ಯಾ: ಭಾರತದ ಜೂನಿಯರ್‌ ಪುರುಷರ ತಂಡದವರು 18 ವರ್ಷದೊಳಗಿನವರ ಸುಲ್ತಾನ್‌ ಜೋಹರ್‌ ಕಪ್‌ ಹಾಕಿ ಟೂರ್ನಿಯಲ್ಲಿ ಬೆಳ್ಳಿಯ ಪದಕ ಗೆದ್ದಿದ್ದಾರೆ.

ಶನಿವಾರ ನಡೆದ ಫೈನಲ್‌ನಲ್ಲಿ ಭಾರತ 2–3 ಗೋಲುಗಳಿಂದ ಬಲಿಷ್ಠ ಬ್ರಿಟನ್‌ ತಂಡಕ್ಕೆ ಮಣಿಯಿತು.

ಹಿಂದಿನ ಆವೃತ್ತಿಯಲ್ಲಿ ಕಂಚಿನ ಸಾಧನೆ ಮಾಡಿದ್ದ ಭಾರತ ತಂಡ ಮೊದಲ ಕ್ವಾರ್ಟರ್‌ನಲ್ಲಿ ಅಮೋಘ ಆಟ ಆಡಿತು. ನಾಲ್ಕನೇ ನಿಮಿಷದಲ್ಲಿ ಸಿಕ್ಕ ಪೆನಾಲ್ಟಿ ಕಾರ್ನರ್‌ನಲ್ಲಿ ವಿಷ್ಣುಕಾಂತ್‌ ಸಿಂಗ್‌ ಚೆಂಡನ್ನು ಗುರಿ ಮುಟ್ಟಿಸಿದರು. ಏಳನೇ ನಿಮಿಷದಲ್ಲಿ ಡೇನಿಯಲ್‌ ವೆಸ್ಟ್‌, ಫೀಲ್ಡ್‌ ಗೋಲು ದಾಖಲಿಸಿ 1–1ರ ಸಮಬಲಕ್ಕೆ ಕಾರಣರಾದರು.

ಮೂರನೇ ಕ್ವಾರ್ಟರ್‌ನಲ್ಲಿ ಬ್ರಿಟನ್‌ ಪಾರಮ್ಯ ಮೆರೆಯಿತು. ಈ ತಂಡದ ಜೇಮ್ಸ್‌ ಓಟೆಸ್‌ 39 ಮತ್ತು 42ನೇ ನಿಮಿಷಗಳಲ್ಲಿ ಕೈಚಳಕ ತೋರಿ ಅಭಿಮಾನಿಗಳನ್ನು ರಂಜಿಸಿದರು. ಹೀಗಾಗಿ ತಂಡ 3–1ರ ಮುನ್ನಡೆ ಗಳಿಸಿ ಪಂದ್ಯದ ಮೇಲಿನ ಹಿಡಿತ ಬಿಗಿ ಮಾಡಿಕೊಂಡಿತು.

ನಿರ್ಣಾಯಕ ಎನಿಸಿದ್ದ ನಾಲ್ಕನೇ ಕ್ವಾರ್ಟರ್‌ನಲ್ಲಿ ಭಾರತ ತಂಡ ಏಕೈಕ ಗೋಲು ದಾಖಲಿಸಲಷ್ಟೇ ಶಕ್ತವಾಯಿತು. ಹೀಗಾಗಿ ಚಿನ್ನದ ಪದಕದ ಕನಸು ಕಮರಿತು.

Tags: 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !