ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐಟಿಟಿಎಫ್‌ ವಿಶ್ವಕಪ್‌ಗೆ ಭಾರತ ಈಕ್ವೆಸ್ಟ್ರಿಯನ್ ತಂಡ

Last Updated 18 ಮಾರ್ಚ್ 2021, 14:12 IST
ಅಕ್ಷರ ಗಾತ್ರ

ಗ್ರೇಟರ್ ನೋಯಿಡಾ: ಅರ್ಹತಾ ಸುತ್ತಿನ ಸ್ಪರ್ಧೆಗಳಲ್ಲಿ ಅಮೋಘ ಸಾಮರ್ಥ್ಯ ತೋರಿದ ಭಾರತದ ಟೆಂಟ್ ಪೆಗ್ಗಿಂಗ್ ತಂಡ ಅಂತರರಾಷ್ಟ್ರೀಯ ಟೆಂಟ್ ಪೆಗ್ಗಿಂಗ್ ಫೆಡರೇಷನ್ (ಐಟಿಪಿಎಫ್‌) ವಿಶ್ವಕಪ್‌ನಲ್ಲಿ ಪಾಲ್ಗೊಳ್ಳಲು ಅರ್ಹತೆ ಪಡೆದುಕೊಂಡಿತು.

ಅರ್ಹತಾ ಸುತ್ತಿನಲ್ಲಿ ನಡೆದ ಏಳು ಸ್ಪರ್ಧೆಗಳ ಪೈಕಿ ಭಾರತ ಆರು ಚಿನ್ನ ಮತ್ತು ಒಂದು ಕಂಚಿನ ಪದಕ ಗಳಿಸಿತು. ಟೂರ್ನಿಯಲ್ಲಿ ಒಟ್ಟು 515 ಪಾಯಿಂಟ್ ಕಲೆ ಹಾಕಿದ ಭಾರತ ಮೊದಲ ಸ್ಥಾನ ತನ್ನದಾಗಿಸಿಕೊಂಡಿತು.482.5 ಪಾಯಿಂಟ್ ಗಳಿಸಿದ ಪಾಕಿಸ್ತಾನ ಎರಡನೇ ಸ್ಥಾನ ಗಳಿಸಿತು. ‌ನೇಪಾಳ 457.5 ಪಾಯಿಂಟ್‌ಗಳೊಂದಿಗೆ ಮೂರನೇ ಸ್ಥಾನಕ್ಕೆ ಸಮಾಧಾನಪ‍ಟ್ಟುಕೊಂಡಿತು. ಬೆಲಾರಸ್ ಮತ್ತು ಅಮೆರಿಕ ಕ್ರಮವಾಗಿ 220.5 ಮತ್ತು 183.5 ಪಾಯಿಂಟ್ ಗಳಿಸಿತು.

ದಿನೇಶ್ ಕಾರ್ಲೇಕರ್, ಬಿ.ಆರ್‌.ಜೇನಾ, ಮೋಹಿತ್‌ ಕುಮಾರ್, ಸಂದೀಪ್ ಕುಮಾರ್ ಮತ್ತು ಹರಿಕೇಶ್ ಸಿಂಗ್ ಅವರು ಭಾರತ ತಂಡದಲ್ಲಿದ್ದರು.

‘ಇದು ಅಮೋಘ ಸಾಧನೆ. ನಮ್ಮ ರೈಡರ್‌ಗಳ ಸಾಮರ್ಥ್ಯ ಖುಷಿ ನೀಡಿದೆ. ಅವರ ಕಠಿಣ ಶ್ರಮಕ್ಕೆ ಇನ್ನಷ್ಟು ಮನ್ನಣೆ ಸಿಗುವ ಭರವಸೆ ಇದೆ’ ಎಂದು ಭಾರತ ತಂಡದ ಕೋಚ್ ಹಾಗೂ ಮ್ಯಾನೇಜರ್ ಅಹಮ್ಮದ್ ಅಫ್ಸರ್ ಅಭಿಪ್ರಾಯಪಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT