ಭಾನುವಾರ, ಫೆಬ್ರವರಿ 23, 2020
19 °C

ಟೆನ್‌ಪಿನ್‌: ಕಿಶನ್‌ಗೆ ಮುನ್ನಡೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಕರ್ನಾಟಕದ ಆರ್‌.ಕಿಶನ್‌ ಅವರು ಇಲ್ಲಿನ ಅಮೀಬಾ ಕೇಂದ್ರದಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಟೆನ್‌ಪಿನ್‌ ಬೌಲಿಂಗ್‌ ಚಾಂಪಿಯನ್‌ಷಿಪ್‌ನಲ್ಲಿ ಮೊದಲ ಸುತ್ತಿನ ಅಂತ್ಯಕ್ಕೆ ಮುನ್ನಡೆ ಗಳಿಸಿದ್ದಾರೆ.

ಗುರುವಾರ ನಡೆದ ಪುರುಷರ ವಿಭಾಗದ ಸ್ಪರ್ಧೆಯಲ್ಲಿ ಕಿಶನ್‌ ಅವರು 12 ಗೇಮ್‌ಗಳಿಂದ 208.58ರ ಸರಾಸರಿಯಲ್ಲಿ ಒಟ್ಟು 2,503 ಪಾಯಿಂಟ್ಸ್‌ ಕಲೆಹಾಕಿದ್ದಾರೆ.

ಹಾಲಿ ಚಾಂಪಿಯನ್‌ ಆಕಾಶ್‌ ಅಶೋಕ್‌ಕುಮಾರ್‌ (2,479) ಎರಡನೇ ಸ್ಥಾನದಲ್ಲಿದ್ದಾರೆ.

ಮಹಿಳಾ ವಿಭಾಗದಲ್ಲಿ ಪಶ್ಚಿಮ ಬಂಗಾಳದ ಸುಚೇತನಾ ಮೊಹಂತಾ ಮುನ್ನಡೆ ಪಡೆದಿದ್ದಾರೆ. ಅವರು 193.58ರ ಸರಾಸರಿಯಲ್ಲಿ 2,323 ಪಾಯಿಂಟ್ಸ್‌ ಗಳಿಸಿದ್ದಾರೆ.

ಹಾಲಿ ಚಾಂಪಿಯನ್‌ ಸಬಿನಾ ಅಟಿಕಾ (2,216), ಹರಿಯಾಣದ ಅನುಕೃತಿ ಬಿಷ್ಣೋಯಿ (2,022) ಮತ್ತು ನವದೆಹಲಿಯ ಅನುರಾಧಾ ಸರ್ದಾ (1,970) ಅವರು ಕ್ರಮವಾಗಿ ಎರಡರಿಂದ ನಾಲ್ಕನೇ ಸ್ಥಾನಗಳಲ್ಲಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)